ಮಂಡ್ಯ: ಒಂದುವರೆ ಲಕ್ಷ ಖರ್ಜು ಮಾಡಿಕೊಂಡು ಲಂಡನ್‌ನಿಂದ (London) ಬಂದು ಯುವತಿ (Women) ಮತದಾನ ಮಾಡಿ ವಿಶೇಷ ಗಮನ ಸೆಳೆದಿದ್ದಾರೆ.
ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸೋನಿಕಾ ಲಂಡನ್‌ನಿಂದ ಬಂದು ಲೋಕಸಭಾ ಚುನಾವಣೆಗೆ ಮತ ಚಾಲಾಯಿಸಿದ್ದಾರೆ . ಸೋನಿಕಾ ಅವರು ಲಂಡನ್‌ನಲ್ಲಿ ಸಾಫ್ಟ್ವೇರ್ (Software) ಉದ್ಯೋಗಿಯಾಗಿದ್ದಾರೆ. ಇದನ್ನೂ ಓದಿ: ಮತದಾನ ಮಾಡಿದ ಸ್ಯಾಂಡಲ್‌ವುಡ್ ತಾರಾ ಬಳಗ
ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆ ಬಗ್ಗೆ ನನ್ನ ಸಹೋದರ ತಿಳಿಸಿದರು. ಮತದಾನ ಮಾಡುವುದು ತುಂಬಾ ಮುಖ್ಯ ಎಂದು ನನಗೆ ಅವರು ಅರಿವು ಮುಡಿಸಿದರು. ಹೀಗಾಗಿ ನಾನು ಲಂಡನ್‌ನಿಂದ ಬಂದು ವೋಟ್ ಹಾಕಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ಸಾವು

