ಬೆಂಗಳೂರು: ಲೋಕಸಭಾ ಚನುವಣಣೆಯಿಂದ (loika Sabha Election) ಸಿಲಿಕಾನ್ ಸಿಟಿ (Silicon City) ಮಂದಿ ದೂರ ಉಳಿದಿದ್ದು, ಈ ಬಾರಿಯೂ ನಗರದಲ್ಲಿ ಕಡಿಮೆ ಮತದಾನವಾಗಿದೆ.
ವಿದ್ಯಾವಂತರೇ ತುಂಬಿಕೊಡಿರೋ ಮಯಾನಗರಿ ಎಂದರೆ ಅದು ಬೆಂಗಳೂರು (Bengaluru). ಮತದಾನ (Voting) ಬಗ್ಗೆ ಚುನಾವಣಾ ಆಯೋಗ ಬೀದಿ ಬೀದಿ ಪ್ರಚಾರ ಮಾಡಿದ್ದರು ಸಹ ಕಡಿಮೆ ಮತದಾನವಾಗಿದೆ. ಸರ್ಕಾರದ ಖಜಾನೆ ತುಂಬಿಸೋ ನಗರಿಯಾಗಿದ್ದರು ಸಹ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿಲ್ಲ. ವಿಕೇಂಡ್ ಎಂದು ಉರು ಖಾಲಿ ಮಾಡಿದ್ದವ್ರು ಮತಗಟ್ಟೆಯಿಂದ ದುರ ಉಳಿದಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೂ ಎಂದಿನಂತೆ ಕೈ ಕೊಟ್ಟ ವಲಸಿಗರು

ಯಾವ ಕ್ಷೇತ್ರದಲ್ಲಿ ಶೇಕಡವಾರು ಮತದಾನ ಎಷ್ಟಾಗಿದೆ?
ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ.
ಇದರಲ್ಲಿ ಅತಿ ಕಡಿಮೆ ಬೆಂಗಳೂರು ಸೆಂಟ್ರಲ್‌ನಲ್ಲಿ 52.81%, ಬೆಂಗಳೂರು ಉತ್ತರದಲ್ಲಿ 54.42 ಪರ್ಸೆಂಟ್%
- ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 67.29ರಷ್ಟು ಮತದಾನವಾಗಿದೆ.
* ಇನ್ನೂ ಬೆಂಗಳೂರು ದಕ್ಷಿಣದಲ್ಲಿ 77.43ರಷ್ಟು ವೋಟಿಂಗ್ ಆಗಿದೆ.
* ಚಾಮರಾಜನಗರದಲ್ಲಿ 76.59,
* ಚಿಕ್ಕಬಳ್ಳಾಪುರದಲ್ಲಿ 76.82,
* ಚಿತ್ರದುರ್ಗದಲ್ಲಿ 73.11,
* ದಕ್ಷಿಣ ಕನ್ನಡದಲ್ಲಿ 77.43ರಷ್ಟು
* ಹಾಸನದಲ್ಲಿ77.51,
* ಕೋಲಾರದಲ್ಲಿ 78.07.
* ಮಂಡ್ಯದಲ್ಲಿ ಅತಿ ಹೆಚ್ಚು 81.48ರಷ್ಟು ವೋಟಿಂಗ್ ಆಗಿದೆ.
* ಮೈಸೂರಲ್ಲಿ 70.45,
* ತುಮಕೂರು 77.70,
* ಚಿಕ್ಕಮಗಳೂರಲ್ಲಿ 76.06ಷ್ಟು ಮತದಾನವಾಗಿದೆ.

