ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉತ್ತರ ಕರ್ನಾಟಕದಲ್ಲಿ (Uttara Kannada) ಮಿಂಚಿನ ಸಂಚಾರ ನಡೆಸಿದ್ದು, ಅವರಿಗಾಗಿ ಜಮಖಂಡಿ ಮೂಲದ ಆನಂದಭಾರತ ಎಂಬ ಅಭಿಮಾನಿ ಅವರಿಗಾಗಿ ವಿಶೇಷ ಉಡುಗರೆ (Gift) ನೀಡಲಿದ್ದಾರೆ.
ಮೋದಿ ಅವರು ಭಾನುವಾರ (ಏ.28) ರಂದು ಬೆಳಗಾವಿ , ಶಿರಸಿ, ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಇಂದು ಅವರು ಬಾಗಲಕೋಟೆಗೆ ಆಸಮಿಸಲಿದ್ದಾರೆ. ಇದನ್ನೂ ಓದಿ:ಛತೀಸ್‌ಗಢದಲ್ಲಿ ಭೀಕರ ಅಪಘಾತ – 23 ಮಂದಿಗೆ ಗಾಯ , 9 ಮಂದಿ ಸಾವು

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಪಿ ಗದ್ದಿಗೌಡ ಮತ್ತು ವಿಜಯಪುರ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರವಾಗಿ ಮತಯಾಚಿಸಲಿದ್ದಾರೆ. ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗರ ಮೂಲಕ ಅನಂದ ಭಾರತ ಎಂಬ ಮೋದಿ ಅಭಿಮಾನಿ ವಿಶೇಷ ನೀಡಲಿದ್ದು, ತಮ್ಮ ರಕ್ತದಲ್ಲಿ (Blood) ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಅವರು ಅರ್ಶೀವಾದ ಮಾಡುತ್ತಿರುವ ಭವಚಿತ್ರ ಬಿಡಿಸಿದ್ದಾರೆ. ಇದನ್ನು ಪ್ರಧಾನಿ ಮೋದಿಯವರಿಗೆ ಉಡುಗುರೆಯಾಗಿ ನೀಡಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದ ವಿ.ಶ್ರೀನಿವಾಸ್ ನಿಧಾನ

