ರಾಯ್ಪುರ: ಜನರಿಂದ ತುಂಬಿದ್ದ ಪಿಕಪ್ ಟ್ರಕ್ ಮತ್ತು ರಸ್ತೆ ಬದಿ ನಿಲ್ಲಿಸಿದ ಟಾಟಾ 407 ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿರುವ (Died) ಘಟನೆ ಭಾನುವಾರ ತಡರಾತ್ರಿ ಛತ್ತೀಸ್‌ಗಢದ (Chhattisgarh) ಬೆಮೆತಾರಾದಲ್ಲಿ ನಡೆದಿದೆ.
ಪಿಕಪ್‌ನಲ್ಲಿದ್ದ ಎಲ್ಲರೂ ಕುಟುಂಬದ ಕಾರ್ಯಕ್ರಮಕ್ಕೆಂದು ಗ್ರಾಮದ ತಿರಯ್ಯಗೆ ತರೆಳಿ ಬಳಿಕ ಪಾರ್ಥಾರ ಗ್ರಾಮಕ್ಕೆ ಮರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಸಂಸದ ವಿ.ಶ್ರೀನಿವಾಸ್ ನಿಧಾನ
ಘಟನೆಯಲ್ಲಿ ಗಾಯಗೊಂಡವರಲ್ಲಿ ಕೆಲವರನ್ನು ರಾಯ್‌ಪುರದ (Rayapura) ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಗಾಯಾಳುಗಳಿಗೆ ಬೆಮೆತ್ರಾ ಮತ್ತು ಸಿಮ್ಲಾದ ಸಿಎಚ್‌ಸಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ನೇಹಾ ಹಿರೇಮಠ ಕೊಲೆ ಪ್ರಕರಣ: ಫಯಾಜ್ DNA ಪರೀಕ್ಷೆ ಮಾಡಲು ಮುಂದಾದ CID
ಬೆಮೆತಾರ ಪೊಲೀಸ್ ಠಾಣಾ ವ್ಯಪ್ತಿಯ ಕಥಿಯಾ ಪೆಟ್ರೋಲ್ ಪಂಪ್ ಬಳಿ ಘಟನೆ ನಡೆದಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ದೇವರ ಮೊರೆ ಹೋದ ಶಿಲ್ಪಾ ಶೆಟ್ಟಿ

