ರಾಯಚೂರು: ಈಜು (Swimming) ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ರಾಯಚೂರು (Raichur) ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ನಡೆದಿದೆ.
ಜೇಗರ್‌ಕಲ್ ಮಲ್ಲಾಪೂರು ಗ್ರಾಮದ ವಿನಾಯಕ (10) ಮೃತ ಬಾಲಕ. ವಿನಾಯಕ ಮಂಗಳವಾರ ಕುಟುಂಬಸ್ಥರೊಂದಿಗೆ ಈಜು ಕಲಿಯಲು ಪಕ್ಕದೂರು ಹೆಂಬೆರಾಳದ ಹಳ್ಳಕ್ಕೆ ಹೋಗಿದ್ದ. ನೀರಿನ ಆಳ ಹೆಚ್ಚಿದ್ದ ಕಡೆ ವಿನಾಯಕ ಈಜಲು ತೆರಳಿದ್ದ ಈಜು ಬಾರದ ಹಿನ್ನೆಲೆ ನೀರುಪಾಲಾಗಿ ಸಾವನ್ನಪಿದ್ದಾನೆ. ಇದನ್ನೂ ಓದಿ:ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್‌ನಲ್ಲಿ ಸುದ್ದಿ ಓಡಲ್ಲ: ಡಿಕೆಶಿ ತೀರುಗೇಟು
ಸ್ಥಳೀಯರು ಹಳ್ಳದಲ್ಲಿ ವಿನಾಯಕನ ಮೃತದೇಹವನ್ನು ಪತ್ತೆಹಚ್ಚಿ ಹೊರ ತೆಗೆದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬಿಯರ್ ಮಾರಾಟದಲ್ಲಿ ಇತಿಹಾಸ ಸೃಷ್ಟಿಸಿದ ಅಬಕಾರಿ ಇಲಾಖೆ

