ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಮಳೆಗೂ ನಗರದ ಹಲವು ಕಡೆಗಳಲ್ಲಿ ಧರೆಗೆ ಉರುಳಿದ ಸಾಲು ಸಾಲು ಮರಗಳು ನೆಲಕ್ಕುರುಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿನ್ನೆ ಒಂದೆ ದಿನ 70ರಷ್ಟು ಮರಗಳು ಧರೆಗುರುಳಿವೆ. 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ. ಒಟ್ಟಾರೆಯಾಗಿ ಒಂದೇ ದಿನ ಸುಂಆರು 70 ಮರಗಳು ನೆಲಕುರುಳಿವೆ.
ವಲಯವಾರು ಲೆಕ್ಕ..
- ದಕ್ಷಿಣ ವಲಯ : 10
* ಆರ್ ಆರ್ ನಗರ ವಲಯ : 32
* ಬೊಮ್ಮನಹಳ್ಳಿ : 06
* ಪಶ್ಚಿಮ ವಲಯ : 10
* ಮಹಾದೇವಪುರ : 01
* ಯಲಹಂಕ : 03
* ಪೂರ್ವ ವಲಯ : 06
* ದಾಸರಹಳ್ಳಿ ವಲಯ : 02

ಇಂದು ಕೂಡ ರಾಜ್ಯದ ಹಲವೆಡೆ ಮಳೆ ಬರುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳ ಕಾಲ ಗಾಳಿ ಸಹಿತ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದ ಎಲ್ಲೆಲ್ಲಿ ಎಷ್ಟು ಮಳೆ?
- ಹಂಪಿ ನಗರ 55 ಮಿ.ಮೀ
* ನಾಯಂಡಹಳ್ಳಿ 51.50ಮಿ.ಮೀ
* ಮಾರುತಿ ಮಂದಿರ 50ಮಿ.ಮೀ
* ನಾಗಪುರ ವಾರ್ಡ್ 49ಮಿ.ಮೀ
* ನಾಯಂಡಹಳ್ಳಿ ವೆಸ್ಟ್ ಝೋನ್ 42ಮಿ.ಮೀ
* ದೊಡ್ಡ ಬಿದರೆಕಲ್ಲು 41.50ಮಿ.ಮೀ
* ವಿದ್ಯಾ ಪೀಠ 41.50ಮಿ.ಮೀ

