ಚಿಕ್ಕೋಟಿ: ರೈತರೊಬ್ಬರು ಸ್ನಾನಕ್ಕೆಂದು ತೆರಳಿದ್ದಾಗ ಮೊಸಳೆ (Crocodile) ಬಾಯಿಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ (Chikkodi) ತಾಲೂಕಿನ ದತ್ತವಾಡ ಸದಲಗಾ ಬಳಿಯ ದೂದ್‌ಗಂಗಾ (Dudhganga) ನದಿ ದಡದಲ್ಲಿ ಸಂಭವಿಸಿದೆ.
ಮಹಾದೇವ ಪುನಪ್ಪ ಖುರೆ(72) ಮೃತ ರೈತ. ಮಹಾದೇಪ್ಪ ಅವರಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ಅವರು ನದಿ ದಡದಲ್ಲಿ ಕೂತು ಸ್ನಾನ ಮಾಡುತ್ತಿದ್ದರು. ಈ ವೇಳೆ ಬಂದ ಮೊಸಳೆ ಮದಾದೆವ ಅವರನ್ನು ಎಳೆದುಕೊಂಡು ಹೋಗಿದೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: Kidnap Case ಗೆ ಟ್ವಿಸ್ಟ್; ಯಾರೂ ಬಲವಂತವಾಗಿ ಕರೆದೊಯ್ದಿಲ್ಲ, ಕಿಡ್ನ್ಯಾಪ್ ಮಾಡಿಲ್ಲ: ಸಂತ್ರಸ್ತೆ ಸ್ಪೋಟಕ ಹೇಳಿಕೆ
ನಂತರ ಅವರ ಮೃತದೇಹ ನದಿಯಲ್ಲಿ ಕಂಡ ಬಳಿಕ ಸ್ಥಳೀಯರು ಶವವನ್ನ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಇಂದು ಹೆಚ್‌ಡಿ ರೇವಣ್ಣ ಬೇಲ್ ಅರ್ಜಿ ವಿಚಾರಣೆ … ಜೈಲಾ ಬೇಲಾ?
ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ