ಲಕ್ನೋ: ಸಿಎಎ (CAA) ಅಡಿಯಲ್ಲಿ ಪೌರತ್ವ ಪ್ರಮಾಣ ಪತ್ರ ನೀಡಲು ಆರಂಭಿಸಿದ್ದೇವೆ ಇದು ಮೋದಿ ಗ್ಯಾರಂಟಿಗೆ (Gurantee) ತಾಜಾ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಉತ್ತರ ಪ್ರದೇಶದ(Uttar pradesh) ಲಾಲ್‌ಗಂಜ್‌ನಲ್ಲಿ ಮಾತನಾಡಿದ ಅವರು, ವಿದೇಶಗಳಿಂದ ಬಂದಿರುವ ಅಲ್ಪಸಂಖ್ಯಾತರು ನಮ್ಮ ದೇಶದಲ್ಲಿದ್ದಾರೆ. ರ್ಧಮದ ಆಧಾರದ ಮೇಲೆ ದೇಶ ಹಂಚಿಕೆಯಾದಾಗ ಬಲಿಯಾದವರು ಇವರು. ಅವರು ಯಾವಾಗ ಬೇಕಾದರೂ ಬರಬಹುದು ಎಂದು ಗಾಂಧೀಜಿ ( Mahtma Gandhi) ಹೇಳಿದ್ದರು. ಆದರೆ ಕಾಂಗ್ರೆಸ್ (Congress) ಈ ಜನರ ಬಗ್ಗೆ ಗಮನಿಸಿಲ್ಲ. ಇಲ್ಲಿನ ಮತಬ್ಯಾಂಕ್‌ಗಾಗಿ ಗಮನಿಸಿಲ್ಲ. ದಲಿತ, ಓಬಿಸಿ ಸಮುದಾಯದ ಜನರು ಕಷ್ಟದಲ್ಲಿದ್ದರು. ಅವರನ್ನು ಕರೆತರುವ ಕೆಲಸ ನಾವು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ
ಹತ್ತು ರ‍್ಷಗಳ ಹಿಂದೆ ಜನರು ದೇವರ ಭರವಸೆಯಲ್ಲಿ ಬದುಕುತ್ತಿದ್ದರು. ಕೆಲವು ಕಡೆ ಬಾಂಬ್ ದಾಳಿ, ಕೆಲವು ಕಡೆ ಸ್ಲೀಪರ್ ಸೆಲ್, ಕೆಲವು ಕಡೆ ಕೋಮು ರ‍್ಷಣೆ, ಇನ್ನೂ ಕೆಲವು ಕಡೆ ಭಯೋತ್ಪಾದನೆಯಿಂದ ಸಂಕಷ್ಟ ಪರಿಸ್ಥಿತಿ ಇತ್ತು. ಸಾವಿರಾರು ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡರು. ಈ ಹಿಂದಿನ ರ‍್ಕಾರಗಳು ಇಂತಹ ಜನರಿಗೆ ಸಹಕಾರ ನೀಡುತ್ತಿದ್ದವು. . ಇದನ್ನೂ ಓದಿ:ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ತಾಯಿ ಎಸ್ಕೇಪ್!
ಈಗಲೂ ನಿಮ್ಮ ಮೀಸಲಾತಿಯನ್ನು ಕಿತ್ತು ಸಮುದಾಯವೊಂದಕ್ಕೆ ನೀಡಲು ಚಿಂತಿಸಿವೆ. ಬಜೆಟ್ 15% ಅಲ್ಪಸಂಖ್ಯಾತರ ಹೆಸರಿನಲ್ಲಿ ಹೋಗುತ್ತಿದೆ. 70 ವರ್ಷಗಳಿಂದ ಹಿಂದೂ-ಮುಸ್ಲಿಂ ರಾಜಕೀಯ ಮಾಡಿವೆ. ನಾವು ಒಂದಾಗಿ ಹೋಗಬೇಕು. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ತಿಳಿಸಿದರು. . ಇದನ್ನೂ ಓದಿ: ಮೋದಿ ಅಮಿತ್ ಶಾರನ್ನ ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ: ಕೇಜ್ರಿವಾಲ್

