ಕನ್ನಡದ ಬಹುಬೇಡಿಕೆ ನಟಿಯಾದ ರಾಧಿಕಾ ಪಂಡಿತ್ ಅವರು ಸದ್ಯ ಸಿನಿಮಾ ರಂಗದಿಂದ ದೂರವಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಬಹುಬೇಡಿಕೆ ಇರುವಾಗಲ್ಲೇ ಮದುವೆ, ಸಂಸಾರ, ಮಕ್ಕಳು ಕಾರಣದಿಂದಾಗಿ ಮತ್ತೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ರಾಧಿಕಾ ಪಂಡಿತ್ (Radhika Pandit) ಮತ್ತು ಸಿನಿಮಾ ರಂಗಕ್ಕೆ ಬರಬೇಕು. ಅಭಿಮಾನಿಗಳನ್ನು ರಂಜಿಸಬೇಕು ಅನ್ನುವುದು ಅಸಂಖ್ಯಾತ ಅಭಿಮಾನಿಗಳ ಆಸೆಯಾಗಿತ್ತು.

ಸಾವಿರಾರು ಅಭಿಮಾನಿಗಳ ಆಸೆ ಮತ್ತೆ ರಾಧಿಕಾ ಅವರನ್ನು ಸ್ಕ್ರೀನ್ ಮೇಲೆ ನೋಡಬೇಕು ಎನ್ನುವುದು. ಇದೀಗ ಈ ಬಗ್ಗೆ ರಾಧಿಕಾ ಪಂಡಿತ್ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಮಯ ಕೂಡಿ ಬರಲಿ ಸಿನಿಮಾ ರಂಗಕ್ಕೆ ಮತ್ತೆ ಬರುತ್ತೇನೆ ಎಂದು ಉತ್ತರಿಸಿದ್ದಾರೆ. ಈ ಮೂಲಕ ಅವರು ಮತ್ತೆ ಸಿನಿಮಾ ರಂಗಕ್ಕೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಮಾಹಿತಿ ಕೊಟ್ಟಿದ್ದು, ಅವರ ಅಭಿಮಾನಿಗಳಲ್ಲಿ ಖುಷಿ ಮನೆಮಾಡಿದೆ. ಇದನ್ನೂ ಓದಿ: ಮಂಡ್ಯದ ಗಂಡು ಅಂಬರೀಶ್ ಜನ್ಮ ಜಯಂತಿ: ಕುಟುಂಬ, ಫ್ಯಾನ್ಸ್ ನಿಂದ ಪೂಜೆ

ಸ್ಯಾಂಡಲ್‌ವುಡ್‌ನ ಅಪರೂಪದ ಜೋಡಿಯಲ್ಲಿ ಯಶ್ ಮತ್ತು ರಾಧಿಕಾ ಅವರದ್ದು ಒಂದು ಜೋಡಿ. ಸಿನಿಮಾ ಮತ್ತು ಖಾಸಗಿ ಬದುಕಿನಲ್ಲೂ ಅಷ್ಟೇ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಮದುವೆ ಬಳಿಕ ರಾಧಿಕಾ ಅವರು ಮನೆ ಮಕ್ಕಳನ್ನು ನೋಡಿಕೊಂಡು ಚಿತ್ರ ರಂಗದಿಂದ ದೂರ ಉಳಿದಿದ್ದಾರೆ. ಸತಿಪತಿಯಾದ ನಂತರ ಮತ್ತೆ ಈ ಜೋಡಿ ಜೊತೆಯಾಗಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ, ಆ ದಿನ ಯಾವತ್ತು ಬರತ್ತೋ ಕಾದು ನೋಡಬೇಕು. ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ: ಗೈರಾದ ಹೇಮಾ & ಟೀಂಗೆ 2ನೇ ನೋಟಿಸ್ ನೀಡಿದ ಸಿಸಿಬಿ

ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಇನ್ನಷ್ಟೇ ಚಿತ್ರೀಕರಣ ಪ್ರಾರಂಭಿಸಬೇಕು. ಈ ಸಮಯದಲ್ಲಿ ರಾಧಿಕಾ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ಆ ಸ್ಟಾರ್ ನಟನ ಹೆಸರು ಹೇಳುತ್ತಿದಂತ್ತೆ ನಾಚಿ ನೀರಾದ ನ್ಯಾಷನಲ್ ಕ್ರಶ್

