ಟೆಹ್ರಾನ್: ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇದರಲ್ಲಿ ಇಬ್ರಾಹಿಂ ರೈಸಿ (Ebrahim Raisi) ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ ಇರಾನ್ನಲ್ಲಿ(Iran) ಆಡಳಿತ ಚುಕ್ಕಾಣಿಯನ್ನು ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ (Mohammad Mokhbar) ಅವರು ವಹಿಸಿಕೊಂಡಿದ್ದಾರೆ. ಇರಾನ್ (Iran) ಸಂವಿಧಾನದ (Constiuiency) ಪ್ರಕಾರ ಅಧ್ಯಕ್ಷರು ಸಾವನ್ನಪ್ಪಿದರೆ, ಅವರ ನಂತರ ಉಪಧ್ಯಾಕ್ಷರು ಅಲ್ಲಿ ಮುಂದುವರಿಯುತ್ತಾರೆ.
ಇರಾನ್‌ನ ಸಂವಿಧಾನದ ಪ್ರಕಾರ ಅಧ್ಯಕ್ಷರು ಸಾವನ್ನಪ್ಪಿದರೆ, ಅವರ ನಂತರ ಉಪಧ್ಯಾಕ್ಷರು ಅಲ್ಲಿ ಮುಂದುವರಿಯುತ್ತಾರೆ.ಇನ್ನು ಇಬ್ರಾಹಿಂ ರೈಸಿ ಸಾವಿನ ನಂತರ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಇರಾನ್ನಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರು ಇಬ್ರಾಹಿಂ ರೈಸಿ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಆಡಳಿತದಲ್ಲಿ ಗಮನಾರ್ಹ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಅವರು ರಾಜಕೀಐ ಅನುಭೌನ್ನು ಹೊಂದಿದ್ದಾರೆ. ಈ ಹಿಂದೆ ಮೊಹಮ್ಮದ್ ಅವರು ಸರ್ಕಾರಿ ಸ್ವಾಮ್ಯದ ಸೆಟಾಡ್‌ನ ಮುಖ್ಯಸ್ಥರಾಗಿದ್ದರು. ಹಾಗೂ ಅಂತರರಾಷ್ಟ್ರೀಯ ಕಾನೂನು ಮತ್ತು ನಿರ್ವಹಣೆಯಲ್ಲಿ ಉನ್ನತ ಪದವಿಗಳನ್ನು ಸಹ ಅವರು ಪಡೆದಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ- ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಸಿಗುತ್ತಾ ಜಾಮೀನು?
ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಎಲ್ಲ ನಾಯಕರ ವಿಶ್ವಾಸ ಹಾಗೂ ಬೆಂಬಲವನ್ನು ಪಡೆದರೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.ಮೊಹಮ್ಮದ್ ಮೊಖ್ಬರ್, ಪಾರ್ಲಿಮೆಂಟರಿ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲ್ಲಾಮ್‌ಹೊಸ್ಸೇನ್ ಮೊಹ್ಸೇನಿ ಎಝೆಯ್ ಅವರನ್ನು ಒಳಗೊಂಡಿರುವ ಮಂಡಳಿಯು 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಮೊಹಮ್ಮದ್ ಮೊಖ್ಬರ್ ಅವರೇ ಈ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಎಲ್ಲ ನಾಯಕರ ವಿಶ್ವಾಸ ಹಾಗೂ ಬೆಂಬಲವನ್ನು ಪಡೆದರೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಲೋಕಸಭೆ ಚುವಾವಣೆ 2024: ಇಂದು 5 ನೇ ಹಂತದ ಮತದಾನ- 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ವೋಟಿಂಗ್

