‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ (Rukmini Vasanth) ಇದೀಗ ಪರಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇದೀಗ ಸ್ಯಾಂಡಲ್‌ವುಡ್ ಬೆಡಗಿ ರುಕ್ಮಿಣಿ ವಸಂತ್ ಅವರು ತಮ್ಮ ನಟನೆಯಿಂದ ಸೈ ಎನಿಸಿಕೊಂಡಿದ್ದಾರೆ. ಇದೀಗ ಅವರು ಬಘೀರ (Bhageera) ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಅದರ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ರುಕ್ಮಿಣಿ ವಸಂತ್ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡಾಕ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಶೇಷ ಅಂದರೆ, ರುಕ್ಮಿಣಿ ವಸಂತ್ ನಟನೆಯ ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಅವರ ಪಾತ್ರಕ್ಕೆ ಬಹಳ ಮಹತ್ವವಿದೆ. ಇದನ್ನೂ ಓದಿ: ಚುಟು ಚುಟು ಬೆಡಗಿ ಆಶಿಕಾ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ

ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಜೊತೆಗೆ ಅವರು ವಿಜಯ್ ಸೇತುಪತಿ (Vijay Sethupathi) ಜೊತೆ ‘ಏಸ್’ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ರುಕ್ಮಿಣಿ ನಟಿಸುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಚಿತ್ರ ರಿಲೀಸ್ ಆಗಲಿದೆ.
ಇದರ ಜೊತೆಗೆ ತಮಿಳಿನ ನಟ ಶಿವಕಾರ್ತಿಕೇಯನ್‌ಗೆ (Sivakarthikeyan) ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರ ಕೂಡ ವರ್ಷದ ಅಂತ್ಯದಲ್ಲಿ ಥಿಯೇಟರ್‌ನಲ್ಲಿ ದರ್ಶನ ಕೊಡಲಿದೆ. ಸೌತ್ ಸಿನಿಮಾಗಳ ಜೊತೆ ಕನ್ನಡದ ‘ಭೈರತಿ ರಣ್‌ಗಲ್’ ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಚ್ಚು ಆಗಿ ಕಿರುತೆರೆಗೆ ದಿವ್ಯಾ ಉರುಡುಗ ಕಮ್ ಬ್ಯಾಕ್

ಅದಷ್ಟೇ ಅಲ್ಲ, ‘ಕಾಂತಾರ’ ಚಾಪ್ಟರ್ 1ರಲ್ಲಿ ರುಕ್ಮಿಣಿ ನಾಯಕಿ ಎಂಬ ಸುದ್ದಿ ಕೂಡ ಇದೆ. ಅಧಿಕೃತ ಘೋಷಣೆ ಆಗಬೇಕಿದೆ. ಕೈತುಂಬಾ ಅವಕಾಶಗಳ ಜೊತೆ ಬ್ಯುಸಿಯಿರುವ ನಟಿ ಮುಂದಿನ ದಿನಗಳಲ್ಲಿ ನಂಬರ್ ಒನ್ ಪಟ್ಟಕ್ಕೆ ಏರುವುದು ಗ್ಯಾರಂಟಿ ಅಂತಿದ್ದಾರೆ ಸಿನಿಪಂಡಿತರು.

