ಪ್ರಯಾಗ್ ರಾಜ್ : ಭಾರತದ ಧಾರ್ಮಿಕ ಪರಂಪರೆಯ ಸಂಕೇತ ಮತ್ತು ಅದರ ಸಂಸ್ಕೃತಿಯ ಕನ್ನಡಿಯಾಗಿರುವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ರಂದು ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.
ಮಹಾ ಕುಂಭಮೇಳ ಆರಂಭದ ಮೊದಲನೇ ದಿನವೇ ಒಂದು ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳ ಬಹಳ ಕಳೆದ ಬಾರಿಗಿಂತ ವಿಜೃಂಭಣೆಯಿಂದ ನಡೆಯುತ್ತಿದೆ.
ಈ ಮಹಾ ಉತ್ಸವದಲ್ಲಿ ಹಿಂದೂಗಳು ಮಾತ್ರವಲ್ಲದೇ ಹಿಂದುಯೇತರರ, ಆಸ್ತಿಕರು, ನಾಸ್ತಿಕರೂ ಸೇರಿಂದಂತೆ ಕೋಟ್ಯಂತರ ಜನ ಭಾಗಿಯಾಗುತ್ತಾರೆ. ಈ ಬಾರಿ ಜಗತ್ತಿನಾದ್ಯಂತದಿಂದ 40 ಕೋಟಿ ಭಕ್ತರು ಮಹಾ ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ.
ದೇಶದ ಮೂರು ಮಹಾನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ದೇಶದ ಮೂಲೆ ಮೂಲೆಯಿಂದ ಜನ ಮಹಾ ಕುಂಭಮೇಳಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗಾಗಿ 10,000 ಹೆಕ್ಟೇರ್‌ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಶೌಚಾಲಯ, ಸ್ವಚ್ಛತೆ ಸೇರಿದಂತೆ ಮೊದಲೆಂದಿಗಿಂತಲೂ ಈ ಬಾರಿ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಉತ್ತಮವಾಗಿ ಮಾಡಲಾಗಿದೆ.
ನಂಬಿಕೆ, ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯನ್ನು ಪ್ರದರ್ಶಿಸುವ ಒಂದು ಮೇಳವಾಗಿದೆ. ಈ ಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಲಾಗುತ್ತದೆ. ಮಹಾ ಕುಂಭಮೇಳವು ಕೇವಲ ಧಾರ್ಮಿಕ ದೃಷ್ಟಿಕೋನದಿಂದಷ್ಟೇ ಮುಖ್ಯವಲ್ಲ, ಅದರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶವೂ ಅಷ್ಟೇ ಆಸಕ್ತಿದಾಯಕ ಮತ್ತು ಸ್ಪೂರ್ತಿದಾಯಕವಾಗಿದೆ. ಆದಾಗ್ಯೂ, ಇದಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಾತನಾಡಿದರೆ, ಇಂದಿಗೂ ನಮಗೆ ಸರಿಯಾದ ಮಾಹಿತಿ ಇಲ್ಲದಿರುವ ಹಲವು ವಿಷಯಗಳಿವೆ.














* 2 ಲಕ್ಷ ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ!
ಮಹಾ ಕುಂಭ 2025 ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಲಿದೆ. ಹೌದು, ಕುಂಭ ಮೇಳೆ ಮುಕ್ತಾಯದ ಹೊತ್ತಿಗೆ 2 ಲಕ್ಷ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. 40 ಕೋಟಿ ಮಂದಿ ಕನಿಷ್ಠ 5 ಸಾವಿರ ರೂಪಾಯಿಗಳನ್ನು ಕುಂಭ ಮೇಳದಲ್ಲಿ ಖರ್ಚು ಮಾಡಿದ್ರೆ 2 ಲಕ್ಷ ಕೋಟಿ ರೂಪಾಯಿ ಆದಾಯ ಉತ್ಪತ್ತಿಯಾಗಲಿದೆ.
ಉದ್ಯಮದ ಅಂದಾಜುಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ IANS, ಪ್ರತಿ ವ್ಯಕ್ತಿಗೆ ಸರಾಸರಿ ವೆಚ್ಚವು 10,000 ರೂ.ಗೆ ಏರಬಹುದು ಮತ್ತು ಒಟ್ಟು ಆರ್ಥಿಕ ಪರಿಣಾಮವು 4 ಲಕ್ಷ ಕೋಟಿ ರೂ.ಗೆ ತಲುಪಬಹುದು ಎಂದು ಹೇಳಿದೆ. ಇದು ನಾಮಮಾತ್ರ ಮತ್ತು ನೈಜ ಜಿಡಿಪಿ ಎರಡನ್ನೂ ಶೇಕಡಾ 1 ಕ್ಕಿಂತ ಹೆಚ್ಚು ಹೆಚ್ಚಿಸುವ ನಿರೀಕ್ಷೆಯಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ಪ್ಯಾಕ್ ಮಾಡಿದ ಆಹಾರಗಳು, ನೀರು, ಬಿಸ್ಕತ್ತುಗಳು, ಜ್ಯೂಸ್ ಮತ್ತು ಊಟ ಸೇರಿದಂತೆ ಆಹಾರ ಮತ್ತು ಪಾನೀಯ ವಲಯವು ಒಟ್ಟಾರೆ ವ್ಯಾಪಾರಕ್ಕೆ 20,000 ಕೋಟಿ ರೂಪಾಯಿಗಳನ್ನು ಸೇರಿಸುತ್ತದೆ ಎಂದು ಅಂದಾಜಿಸಲಾಗಿದೆ.
ತೈಲ, ದೀಪಗಳು, ಗಂಗಾಜಲ, ವಿಗ್ರಹಗಳು, ಧೂಪದ್ರವ್ಯಗಳು ಮತ್ತು ಧಾರ್ಮಿಕ ಪುಸ್ತಕಗಳಂತಹ ಧಾರ್ಮಿಕ ವಸ್ತುಗಳು ಮತ್ತು ಕೊಡುಗೆಗಳು ಆರ್ಥಿಕ ಚಟುವಟಿಕೆಯ ಮತ್ತೊಂದು ಪ್ರಮುಖ ಕ್ಷೇತ್ರವಾಗಿದ್ದು, ಅಂದಾಜು 20,000 ಕೋಟಿ ರೂಪಾಯಿ ಇದರಿಂದ ಬರುವ ನಿರೀಕ್ಷೆಯಿದೆ.
* ಮಹಾ ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನ :
ಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಂದಿನಿ ಉತ್ಪನ್ನಗಳು ಲಭ್ಯವಾಗಲಿವೆ. ಈ ಸಂಬಂಧ ಕೆಎಂಎಫ್ ಚಾಯ್ ಪಾಯಿಂಟ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಎಂಎಫ್, ಗುಡ್ ಲೈಫ್ ಹಾಲು ಹಾಗೂ ಇತರ ನಂದಿನಿ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಚಾಯ್ ಪಾಯಿಂಟ್ ಜೊತೆ ಪಾಲುದಾರಿಕೆ ಮಾಡಲಾಗಿದೆ. ಚಾಯ್ ಪಾಯಿಂಟ್ ಭಾರತ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿದ್ದು, ಪ್ರಯಾಗ್ ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳ 2025 ರಲ್ಲಿ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಮಹಾಕುಂಭ ಮೇಳ ಜ.13 ರಿಂದ ಜ.20 ರವರೆಗೆ ನಡೆಯಲಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಮಹಾ ಕುಂಭ ಮೇಳ ಆಯೋಜಿಸಲಾಗಿರುವ ಸಂಕೀರ್ಣದಲ್ಲಿ ಚಾಯ್ ಪಾಯಿಂಟ್ 10 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಇಲ್ಲಿ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಒಂದು ಕೋಟಿ ಕಪ್ಗಳಿಗಿಂತಲೂ ಹೆಚ್ಚು ಚಹಾ ತಯಾರಿಸಿ, ಒದಗಿಸಲು ಸಿದ್ಧತೆ ಮಾಡಿಕೊಂಡಿದೆ. ಒಂದೇ ಸಮಾರಂಭದಲ್ಲಿ ಅತೀ ಹೆಚ್ಚು ಕಪ್ ಚಹಾ ಮಾರಾಟ ಮಾಡಿ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸುವ ಗುರಿಯನ್ನು ಸಹ ಹೊಂದಿದೆ. ಮಹಾ ಕುಂಭ ಮೇಳದಲ್ಲಿ ಸಿದ್ಧಪಡಿಸಲಾಗುವ ಪ್ರತಿಯೊಂದು ಕಪ್ ಚಹಾ ನಂದಿನಿಯ ಪರಿಶುದ್ಧ ಹಾಗೂ ಉತ್ಪತ ಗುಣಮಟ್ಟದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ.

