ಬೆಂಗಳೂರು : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ವಿಚಾರಕ್ಕೆ ವಿರೋಧ ವ್ಯಕ್ತ ಪಡಿಸಿದ ಉದ್ಯಮಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉದ್ಯಮಿಗಳ ವಿರುದ್ಧ ರಾಜ್ಯ ರೈತ ಸಂಘ ಗರಂ ಆಗಿದೆ.
ರಾಜ್ಯ ಸರ್ಕಾರ ಮಸೂದೆ ತರಲು ಮುಂದಾಗಿದ್ದು ಸರಿಯಾದ ಕ್ರಮ , ಉದ್ಯಮಿಗಳಿಗೆ ಹೆದರಿ ಹಿಂದೇಟು ಹಾಕುತ್ತಿರುವುದು ಸರ್ಕಾರ ನಿಶ್ಯಕ್ತಿತನ, ಉದ್ಯಮಗಳ ಸ್ಥಾಪನೆಗೆ ರೈತ ಸಮುದಾಯ ಮೂರು ಕಾಸಿನ ಪರಿಹಾರಕ್ಕೆ ಭೂಮಿ ಬಿಟ್ಟು ಕೊಡ್ತಾರೆ.
ರಾಜ್ಯದ ಜಲ ಕೈಗಾರಿಕೆ, ಸಂಪನ್ಮೂಲ ಬಳಕೆಯಿಂದ ಡಾಲರ್ಸ್ ಗಟ್ಟಲೇ ಸಂಪಾದನೆ ಮಾಡುತ್ತಾರೆ. ಇಷ್ಟೊಂದು ಹಣ ಸಂಪಾದಿಸುವ ಉದ್ಯಮಿಗಳಿಗೆ ನಾಡಿನ ನೆಲದವರು ಬೇಡವೇ..? ಇದನ್ನು ಸಹಿಸಲು ಯಾವುದೇ ಕಾರಣಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಉದ್ಯಮಿಗಳ ನಿಲುವಿನ ವಿರುದ್ಧ ಹೋರಾಟಕ್ಕೆ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ನಾಗೇಂದ್ರ ಕರೆಕೊಟ್ಟಿದ್ದಾರೆ. ನಮ್ಮ ನಾಡಿನ ಯುವಕರು ತಾಂತ್ರಿಕ ಪರಿಣಿತಿಯಲ್ಲಿ ಪ್ರಪಂಚದಲ್ಲಿ ಮುಂದಿದ್ದಾರೆ. ಇದೆ ಕಾರಣಕ್ಕೆ ರಾಜ್ಯದವರಿಗೆ ಮುಂದುವರೆದ ದೇಶದಲ್ಲಿ ಕೆಲಸ ಲಭ್ಯವಾಗಿವೆ. ಸರ್ಕಾರ ಯಾವುದೇ ಮೂಲಾಜಿಗೆ ಒಳಗಾಗದೆ ಮಸೂದೆ ಜಾರಿ ಮಾಡಲು ಮಾಡುವಂತೆ ಅವರು ಆಗ್ರಹ ಮಾಡಿದ್ದಾರೆ.