ಬೆಂಗಳೂರು,ಜು:18; ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಆಗಸ್ಟ್ 1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ ತೀರ್ಮಾನವನ್ನು ಬಿ.ಎಂ.ಟಿ.ಸಿ ಮನ್ಸೂರ್ ಸಂಘ ಹಾಗು ಕರ್ನಾಟಕ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ಸ್ವಾಗತಿಸುತ್ತ, ನಿವೃತ್ತಿಯಾದ ನೌಕರರಿಗೆ ಉಪಧನ ಹಾಗು ಹಿಂಬಾಕಿ ಪಾವತಿ ವಿಷಯದಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಎರಡು ಸಂಘಗಳು ಆಗ್ರಹಿಸಿದವು
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮಾದಯ್ಯ,ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತದೆ. ಇದರಿಂದ ರಾಜ್ಯದ ಲಕ್ಷಾಂತರ ನೌಕರರ ವೇತನ ಶೇ. 27.5 ರಷ್ಟು ಹೆಚ್ಚಾಗಲಿದೆ.ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಪ್ರಾರಂಭದಿಂದ ಇಲ್ಲಿವರೆಗೂ ಹಗಲು-ರಾತ್ರಿ ಮಳೆ, ಚಳಿ. ಬಿಸಿಲು ಲೆಕ್ಕಿಸದೆ ಹಬ್ಬ ಹರಿದಿನಗಳನ್ನು ಬದಿಗೊತ್ತಿ ಕರ್ತವ್ಯ ನಿರ್ವಹಿಸಿ ಯಶಸ್ವಿಗೊಳಿಸಿದ ಸಾರಿಗೆ ಕಾರ್ಮಿಕ ವರ್ಗದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕಿದೆ.
1.35,000 ಸಾರಿಗೆ ಕಾರ್ಮಿಕರ ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ವೇತನ ಪಾವತಿ ವಿಷಯದಲ್ಲಿ ಆನೇಕ ಬಾರಿ ರಾಜ್ಯ ಸರ್ಕಾರಕ್ಕೆ ನಮ್ಮ ಸಂಘ ಮನವಿ ಸಲ್ಲಿಸಿದೆ. 2023 ರಲ್ಲಿ ನಿವೃತ್ತಿಯಾದ ನೌಕರರಿಗೆ ಉಪಧನ ಹಾಗು ಹಿಂಬಾಕಿ ಪಾವತಿ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿವೃತ್ತ ನೌಕರರು ಬೇಡಿಕೆ ಇಟ್ಟು ಕಾಯುತ್ತಿದ್ದಾರೆ.
ಲಕ್ಷಾಂತರ ಸಾರಿಗೆ ಕಾರ್ಮಿಕರು ಹಾಗು ನಿವೃತ್ತ ನೌಕರರು ಸಂಕಷ್ಟದಲ್ಲಿ ಇದ್ದಾರೆ. ಆದ ಕಾರಣ ಮುಖ್ಯಮಂತ್ರಿಗಳು ಸಾರಿಗೆ ಸಿಬ್ಬಂದಿಗಳ ವೇತನ ಪರಿಷ್ಕರಣೆಯ ವಿಷಯದಲ್ಲಿ ಮತ್ತು ನಿವೃತ್ತಿಯಾದ ನೌಕರರಿಗೆ ಉಪಧನ ಹಾಗು ಹಿಂಬಾಕಿ ಪಾವತಿ ವಿಷಯದಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಸಮಸ್ತ ಕಾರ್ಮಿಕ ವರ್ಗದ ಪರವಾಗಿ ರಸ್ತೆ ಸಾರಿಗೆ ಮಜದೂರ್ ಸಂಘ ಒತ್ತಾಯ ಮಾಡುತ್ತದೆ ಎಂದರು.