ಬೆಂಗಳೂರು : ಹತ್ಯೆ ಪ್ರಕರಣದಲ್ಲಿ ತಿಂಗಳಿಂದ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ನೋಡಲು ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಮೈಸೂರಿನ ಸರಸ್ವತಿಪುರಂ ನಿವಾಸಿ ಮಂಜುಳಾ ಎಂಬ ಮಹಿಳೆಯೊಬ್ಬರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗಾಗಿ ಚಕ್ಕುಲಿ ತಯಾರಿಸಿಕೊಂಡು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಮ್ಮನ್ನು ಒಳಬಿಡುವಂತೆ ಪೊಲೀಸರ ಮುಂದೆ ಮನವಿ ಮಾಡಿದ ಮಹಿಳೆ.
ದರ್ಶನರನ್ನು ಭೇಟಿ ಮಾಡಲು ಚಕ್ಕುಲಿ, ಬಾತ್ ಕೈಯಾರೆಮಾಡಿಕೊಂಡು ಚೀಲದಲ್ಲಿ ತುಂಬಿಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾಳೆ. ಆದರೆ ಗೇಟ್‌ನಲ್ಲಿ ಒಳಬಿಡದ ಪೊಲೀಸರು.’ದರ್ಶನ್ ತಪ್ಪು ಮಾಡಿದ್ದರೆ ತಪ್ಪೇ. ನಮಗೆ ಎರಡು ದಿನ ಬೇಜಾರಿತ್ತು. ಆದೆ ದರ್ಶನ್ನರನ್ನ ಬಿಟ್ಟುಕೊಡೋಾಗುತ್ತಾ? ದಯವಿಟ್ಟು ದರ್ಶನ್ ಭೇಟಿ ಮಾಡಬೇಕು ಅವರಿಗೆ ಚಕ್ಕುಲಿ ಕೊಡಬೇಕು ಒಳಗೆ ಬಿಡಿ, ನಮ್ಮನ್ನ ಒಳಗೆ ಕಳಿಸುವಂತೆ ಮಾಧ್ಯಮದವರು ಸಹಾಯ ಮಾಡಬೇಕು ಎಂದು ಮಾಧ್ಯಮದವರ ಸಹಾಯ ಕೇಳುತ್ತಿರುವ ಮಹಿಳೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೊಲೀಸರು ಬ್ಯಾರಿಕೇಡ್ ಎಳೆದು ವಾಪಸ್ ಕಳಿಸಿದ್ದಾರೆ.
ನಟ ದರ್ಶನ್ ಭೇಟಿ ಮಾಡಲು ಕನ್ನಡ ಚಲಚಿತ್ರರಂಗದ ಅನೇಕ ಕಲಾವಿದರು ಭೇಟಿ ಮಾಡಲು ಬಂದಿದ್ದಾರೆ ಆ ಪೈಕಿ ಕೆಲವೇ ಕೆಲವರು ಭೇಟಿ ಮಾಡಿದರೆ ಉಳಿದವರು ವಾಪಸ್ ಆಗಿದ್ದಾರೆ. ನಿನ್ನೆಯಷ್ಟೇ ಹಿರಿಯ ಹಾಸ್ಯನಟ ಸಾಧುಕೋಕಿ ಭೇಟಿಗೆ ಬಂದಿದ್ದರು. ಆದರೆ ಪೊಲೀಸರು ಅವಕಾಶ ಕೊಡದ ಹಿನ್ನೆಲೆ ವಾಪಸ್ ಆಗಿದ್ದರು.

