ಬೆಂಗಳೂರು : ಬಿಬಿಎಂಪಿ ನಿರ್ಲಕ್ಷ್ಯದಿಂದ ಮತ್ತೊಂದು ಯಡವಟ್ಟು ಸಂಭವಿಸಿದೆ. ವಯಸ್ಸಾದ ಮರ, ಒಣಗಿದ ಮರಗಳನ್ನು ತೆರುವ ಮಾಡದ ಪರಿಣಾಮ ಬೃಹತ್ ಮರ ಬಿದ್ದು ಇಬ್ಬರಿಗೆ ಬಾರೀ ಪೆಟ್ಟಾಗಿದೆ. ನಿನ್ನೆಯೂ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದ ಮರ – ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ಬಳಿ ಘಟನೆ – ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರು – ಇಂದು ಆಟೋದ ಮೇಲೆ ಬಿದ್ದಿರುವ ಮರ.
ರಿಚ್ಮಂಡ್ ಸರ್ಕಲ್ ಬಳಿ ಈ ನೆಡೆದ ದುರ್ಘಟನೆ ನಡೆದಿದ್ದು ಆಟೋ ಮೇಲೆ ಬಿದ್ದ ಬೃಹತ್ ಮರ ಬಿದ್ದು ಆಟೋ ಸಂಪೂರ್ಣ ಜಖಂ ಆಗಿದೆ. ಆಟೋದಲ್ಲಿದ್ದವರ ಕಾಲು ಮುರಿತವಾಗಿದ್ದು ಡ್ರೈವರ್ ದಿವಾಕರ್ ಗೆ ಬಲಗಾಲು ಮುರಿದಿದೆ.
ಕೂಡಲೇ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ., ಮರ ಬಿದ್ದ ಪರಿಣಾಮ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ.

