ಬೆಂಗಳೂರು : ಶರವೇಗದಲ್ಲಿ ಬಂದ ಕಾರು ಭೀಕರವಾಗಿ ಬೈಕ್ ಗೆ ಡಿಕ್ಕಿಯಾಗಿ ಪವಾಡ ಸದೃಶ್ಯರೀತಿ ಬೈಕ್ ಬಚಾವಾಗಿರೋ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.
ಕಾರು ಬೈಕ್ಗೆ ಡಿಕ್ಲಿಯಾದ್ರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಸಮೇತ ಸವಾರ. ರಸ್ತೆಯಲ್ಲಿ ಹಾರಿ ಬಿದ್ದಿದ್ದಾನೆ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಒಂದು ಕಡೆ, ಧರಿಸಿದ್ದ ಹೆಲ್ಮೆಟ್ ಒಂದು ಕಡೆ ಬೈಕ್ ಸವಾರ ಒಂದು ಎಗರಿ ರಸ್ತೆಮೇಲೆ ಬಿದ್ದಿದ್ದಾರೆ.
ಅಪಘಾತದ ದೃಶ್ಯದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆಗಷ್ಟ್ 15 ರ ಬೆಳಗ್ಗೆ 7:50 ರ ಸುಮಾರಿಗೆ ಸರ್ಜಾಪುರ ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

