ಬೇತುಲ್: ಮಧ್ಯಪ್ರದೇಶದಲ್ಲಿ (Madhya Pradesh) ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರಿದ್ದ ಬಸ್ ಪಲ್ಟಿಯಾಗಿದ್ದು, 21 ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಉಪ ವಿಭಾಗಾಧಿಕಾರಿ ಶಾಲಿನಿ ಪರಸ್ತೆ ತಿಳಿಸಿದ್ದಾರೆ. ಐವರು ಪೊಲೀಸರು ಮತ್ತು ಉಳಿದ ಗೃಹರಕ್ಷಕರು ಸೇರಿದಂತೆ ಒಟ್ಟು 40 ಜನ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸಕ್ಕರೆ ನಾಡಲ್ಲಿಂದು ಕೈ-ಕಮಲ ಸಮಾವೇಶ
ಈ ಬಸ್ ಛಿಂದಾ ಕ್ಷೇತ್ರದಿಂದ ಚುನಾವಣಾ ಕರ್ತವ್ಯ ಮುಗಿಸಿ ರಾಜ್‌ಗಡಕ್ಕೆ ಬರುತ್ತಿದ್ದಾಗ ಎದುರಿನಿಂದ ಟ್ರಕ್ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಎಂಟು ಸಿಬ್ಬಂದಿಗೆ ಬೆತುಲ್ ಜಿಲ್ಲಾಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಸಣ್ಣಪುಟ್ಟ ಗಾಯಗೊಂಡವರಿಗೆ ಶಾಹಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಗರದಲ್ಲಿ 1 ಸಾವಿರ ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್