ಮಂಡ್ಯ: ಸಕ್ಕರೆ ನಾಡು ಮಂಡ್ಯ ( Mandya) ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ (Kumaraswamy) ಅವರನ್ನು ಮನೀಸಲು ಕಾಂಗ್ರೆಸ್ (Congress) ನಾಯಕರು ಮುಂದಾಗಿದ್ದಾರೆ.
ಸ್ಟಾರ್ ಚಂದ್ರು ಪರ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ,ಕೆಶಿವಕುಮಾರ್ ಪ್ರಚಾರ ಅಭೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಕೆ.ಆರ್.ನಗರ ನಂತರ ಕೆ.ಆರ್. ಪೇಟೆ ಹಾಗೂ ಅಂತಿಮವಾಗಿ ನಾಗಮಂಡಲದಲ್ಲಿ ಪ್ರಚಾರ ಸಭೆ ನಡೆಯಲಿದೆ. ಪ್ರತಿ ಸಮಾವೇಶದಲ್ಲೂ 50 ಸಾವಿರ ಜನರನ್ನು ಸೇರಿಸುವ ನೀರಿಕ್ಷೆಯಲ್ಲಿ ಕೈ ನಾಯಕರು ಇದ್ದಾರೆ. ಇದನ್ನೂ ಓದಿ: ನಗರದಲ್ಲಿ 1 ಸಾವಿರ ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್
ಒಂದು ಕಡೆ ಕೈ ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರದ ಮೂರು ವಿಧಾನಸಭಾ ಕ್ಷೇತದರ ವ್ಯಪ್ತಿಯಲ್ಲಿ ಪ್ರಚಾರ ಮಾಡಿದ್ರೆ ಬಿಜೆಪಿ-ಜೆಡಿಎಸ್ ಸಹ ಪ್ರಚಾರ ನಡೆಸಲು ಮುಂದಾಗಿದೆ. ಒಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತಂದೆ ಕುಮಾರಸ್ವಾಮಿ ಪರ ಬೆಳಗ್ಗೆಯಿಂದಲೇ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ವರುಣಾರ್ಭಟ: ಮಳೆ ಅಬ್ಬರಕ್ಕೆ ಶಿವಮೊಗ್ಗ, ಬೀದರ್‌ನಲ್ಲಿ ಇಬ್ಬರು ಬಲಿ
ಪಾಂಡವಪುರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶ ಜರುಗಲಿದೆ. ಈ ವೇಳೆ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್- ಬಿಜೆಪಿ ನಾಯಕರು ಭಾಗಿಯಾಲಿದಗ್ದಾರೆ. ಇದಲ್ಲದೇ ಮಾಜಿ ಸಿಎಂ ಯಡಿಯೂರಪ್ಪ ಸಹ ಈ ವೇಳೆ ಭಾಗಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದರ್ಶನ್ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕುರಿತು ಸುಮಲತಾ ಸ್ಪಷ್ಟತೆ
ಒಂದು ಕಡೆ ಹೆಚ್‌ಡಿಕೆ ಮಣಿಸಲು ಕೈ ನಾಯಕರು ರಣತಂತ್ರ ರೂಪಿಸುತ್ತಿದ್ದರೆ, ಇನ್ನೊಂದೆಡೆ ಹೆಚ್‌ಡಿಕೆ ಗೆಲುವಿಗೆ ಬಿಜೆಪಿ-ಜೆಡಿಎಸ್ ನಾಯಕರು ಮಂಡ್ಯದಲ್ಲಿ ತೊಡೆ ತಟ್ಟಿದ್ದಾರೆ. ಅಂತಿಮವಾಗಿ ಮತದಾರ ಪ್ರಭು ಯಾರ ಕಡೆ ವಾಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಬಾತ್ ರೂಮ್‌ನಲ್ಲಿದ್ದ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯುರಿಟಿ ಗಾರ್ಡ್- ಕಂಬಕ್ಕೆ ಕಟ್ಟಿ ಥಳಿಸಿದ ಜನರು

