ಹಾಸನ: ಬೈಕ್ (Bike) ಹಾಗೂ ಸಾರಿಗೆ ಬಸ್ (Governmnet Bus) ನಡುವೆ ಅಪಘಾತ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿ ಸರ್ಕಲ್ ಬಳಿ ನಡೆದಿದೆ.
ಬೆಂಗಳೂರು (Bengaluru) ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ರಸ್ತೆಯಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್ ಹೊತ್ತಿ ಉರಿದಿದೆ. ಕೂಡಲೇ ಚಾಲಕ ರಸ್ತೆಯಲ್ಲೇ ಬಸ್ ನಿಲ್ಲಿಸಿದ್ದು, ಬಸ್‌ನಿಂದ ಕೆಳಗಿಳಿದು ಪ್ರಯಾಣಿಕರು ಓಡಿದ್ದಾರೆ. ನಂತರ ಸಂಪೂರ್ಣ ಬಸ್ ಹೊತ್ತಿಉರಿದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ಈಜಲು ಹೋದವರು ಕೆರೆ ಪಾಲು
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಮೃತದೇಹಗಳು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಮೊದಲು ಬುದ್ದಿ ಹೇಳಬೇಕು: ಮುತತಾಲಿಕ್

