ಮುಂಬೈ: ಮಹಾರಾಷ್ಟ್ರ ಸ್ಟೇಟ್ ಎಲಿಕ್ಟ್ರಿಸಿಟಿ ಡಿಸ್ಟ್ರಿಬ್ಯುಷನ್ ಕಂ ಲಿಮಿಟೆಡ್ನ ಮಹಿಳಾ (Women) ಟೆಕ್ನಿಷಿಯನ್ ಒಬ್ಬರು 570 ರೂಪಾಯಿ ಹೆಚ್ಚಿನ ವಿದ್ಯುತ್ ಬಿಲ್ (Electric Bill) ನೀಡಿದ್ದಾರೆ ಎಂದು ಕೊಲೆ (Murder) ಮಾಡಿರುವ ಘಟನೆ ಬಾರಾಮತಿಯಿಂದ 35 ಕಿ.ಮೀ ದೂರದಲ್ಲಿರುವ ಮೋರ್ಗಾಂವ್ ಗ್ರಾಮದಲ್ಲಿ ನಡೆದಿದೆ.
ರಿಂಕು (34) ಮೃತ ದುರ್ದೈವಿ. ಬುಧವಾರ (Wednesday) ಬೆಳಗ್ಗೆ ಎಂಎಸ್ಇಡಿಸಿಎಲ್ ಕಚೆರಿಗೆ ತೆರಳಿ ಹತ್ತು ದಿನಗಳ ರಜೆ ಮುಗಿಸಿ ವಾಪಸಾದ ಥಿಟೆ ಮೇಲೆ ಹರಿತವಾದ ಆಯುಧದಿಂದ ಸುಮಾರು 16 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪಾನಿಪುರಿ ಕೊಡಿಸುವುದಾಗಿ ಕರೆದೋಯ್ದು ಬಾಲಕಿ ಮೇಲೆ ಅತ್ಯಾಚಾರ
ಕಳೆದ ವಾರ ಇದೇ ಪ್ರದೇಶದಲ್ಲಿ ಗುಂಡವಲಿ ಗ್ರಾಮದಲ್ಲಿ ಕಾಲೇಜು ವಿದ್ಯರ್ಥಿಗಳ ಮೇಲೆ ಅಪ್ರಾಪ್ತರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ವಿದ್ಯುತ್ ಇಲಾಖೆ ಸ್ಪಷ್ಟನೆ ನೀಡಿದ್ದು, ಮಹಿಳಾ ತಂತ್ರಜ್ಞರು ನೀಡಿದ್ದ ಬಿಲ್ನಲ್ಲಿ ಯಾವುದೇ ತಪ್ಪಿರಲಿಲ್ಲ, ಏಪ್ರಿಲ್ನಲ್ಲಿ ಆರೋಪಿ 63 ಯೂನಿಟ್ಗಳನ್ನು ಬಳಸಿದ್ದು 570 ರೂ. ಬಿಲ್ ಬಂದಿದೆ, ಬೇರೆತಿಂಗಳಿಗಿಂತ ಈ ತಿಂಗಳಿನಲ್ಲಿ ಸೆಕೆ ಹೆಚ್ಚಿರುವ ಕಾರಣ ವಿದ್ಯುತ್ ಹೆಚ್ಚು ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಮೇಲೆ ದೂರು ದಾಖಲು
ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕಾಲೇಜ್ನಲ್ಲಿ ಶುರುವಾದ ಜಗಳ ಕಿಡ್ನಾಪ್ವರೆಗೂ ಬಂತು.- ಬಾಡಿಗೆ ಮನೆ ನೋಡಲು ಹೋಗಿದ್ದ ವಿದ್ಯಾರ್ಥಿಗಳ ಕೇಸ್