ಕಲಬುರಗಿ: ಸೆಕ್ಯುರಿಟಿ ಗಾರ್ಡ್(Security Guard) ಬಾತ್ ರೂಮ್‌ನಲ್ಲಿದ್ದ ಮಹಿಳೆಯ ವಿಡಿಯೋ ಮಾಡಿರುವಂತಹ ಘಟನೆ ನಗರದ ರಾಮ ಮಂದಿರ ವೃತ್ತದ ಬಳಿಯಿರುವ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ವಿಶ್ವನಾಥ್ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದ. ಇದನ್ನೂ ಗಮನಿಸಿ ಮಹಿಳೆ ಕೂಡಲೇ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಮಹಿಳೆಯ ಗಂಡ ಬಂದು ಸೆಕ್ಯುರಿಟಿ ಗಾರ್ಡ್ನನ್ನು ಹಿಡಿದು ಥಳಿಸಿದ್ದಾರೆ. ಇದನ್ನೂ ಓದಿ: ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ – ಘಟನೆಯಲ್ಲಿ ಓರ್ವ ಗಂಭೀರ, ಐವರಿಗೆ ಗಾಯ
ಅಪಾರ್ಟ್ಮೆಂಟ್ ಅಂಡರ್ ಗ್ರೌಂಡ್‌ನಲ್ಲಿರುವ ಕಂಬಕ್ಕೆ ಸೆಕ್ಯುರಿಟಿ ಗಾರ್ಡ್ ವಿಶ್ವನಾಥ್ ನನ್ನು ಕಟ್ಟಿ ಹಾಕಿ ಅಪಾರ್ಟ್ ನಿವಾಸಿಗಳು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ವಿದೇಶಿ ಡ್ರಗ್ ಪೆಡ್ಲರ್: 4 ಕೋಟಿ ಮೌಲ್ಯದ ಮಾದಕ ಚಸ್ತು ಜಪ್ತಿ

