ಮಧ್ಯಪ್ರದೇಶ: ಯುವತಿಯೊಬ್ಬಳು ಮದುವೆಯಾಗಲು (Marriage) ನಿರಾಕರಿಸಿದ್ದಕ್ಕೆ ಯುಬಕನೊಬ್ಬ ಚಿತ್ರಹಿಂಸೆ ನೀಡಿರುವ ಘಟನೆ ಗುನಾದಲ್ಲಿ ನಡೆದಿದೆ.
ಮೊದಲು ಬೆಲ್ಟ್ ಹಾಗೂ ಪೈಪ್ನಿಂದ ತೀವ್ರವಾಗಿ ಥಳಿಸಿದ್ದಾನೆ. ನಂತರ ಗಾಯದ ಮೇಲೆ ಮೆಣಸಿನ ಪುಡಿಯನ್ನು ಎರಚಿದ್ದು, ಬಳಿಕ ಆಕೆ ನೋವಿನಿಂದ ನರಳಲು ಪ್ರಾರಂಭಿಸಿದಾಗ ಆಕೆಯ ತುಟಿಗೆ ಫೆವಿಕ್ವಿಕ್ನಿಂದ ಅಂಟಿಸಿ ಕೃತ್ಯ ಮೆರೆದಿದ್ದಾನೆ. ಇದನ್ನೂ ಓದಿ: ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ.
23 ವರ್ಷದ ಯುವತಿ ತನ್ನ ತಾಯಿಯೊಂದಿಗೆ ಇಲ್ಲಿ ವಾಸವಿದ್ದಾಳೆ, ತಂದೆ ಬಹಳ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅದೇ ಊರಿನವನಾದ ಅಯಾನ್ ಪಠಾಣ್ ಆಕೆಯನ್ನು ಮದುವೆಯಾಗುತ್ತೇನೆ ಎಂದು ಮುಂದೆ ಬಂದಿದ್ದ.ಆದರೆ ಆಕೆ ಅಯಾನ್ನ್ನು ಮದುವೆಯಾಲು ನಿರಾಕರಿಸಿದ್ದಳು. ಇದರಿಂದ ಅಯನ್ ಕೋಪಗೊಂಡಿದ್ದ. ಇದನ್ನೂ ಓದಿ: ಜೈಲಿನಲ್ಲಿ ಹಣ ಬೇಡಿಕೆ ಇಟ್ಟ ಜೈಲರ್ ಸಸ್ಪೆಂಡ್
ಇದೇ ವೇಳೆ ಆಕೆಯನ್ನ ಕಿಡ್ನ್ಯಾಪ್ ಮಾಡಿ ತನ್ನ ಮನೆಗೆ ಕರೆದೊಯ್ದಿದ್ದ. ಮನೆಯಿಂದ ಹೊರ ಹೋಗಲು ಸಹ ಬಿಟ್ಟಿರಲಿಲ್ಲ. ಯುವತಿಯ ತಾಯಿ ಆಕೆಯ ಮನೆಯನ್ನು ಮಾರಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಆತ ಮತ್ತಷ್ಟು ಕೋಪಗೊಂಡಿದ್ದಾನೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಗೆ ಇಡಿ ಶಾಕ್ – 98 ಕೋಟಿ ಮೌಲ್ಯದ ಆಸ್ತಿ ವಶಕ್ಕೆ
ಮನೆಯನ್ನು ತನ್ನ ಹೆಸರಿಗೆ ಮಾರುವಂತೆ ಆತ ಒತ್ತಡ ಹೇರಿದ್ದ. ಈ ವಿಚಾರವಾಗಿ ಒಂದು ತಿಂಗಳ ಕಾಲ ಅಯಾನ್ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ. ನಂತರ ಮಂಗಳವಾರ ರಾತ್ರಿ ಯುವತಿಗೆ ಬೆಲ್ಟ್ ಹಾಗೂ ನೀರಿನ ಪೈಪ್ನಿಂದ ಹೊಡೆದಿದ್ದಾನೆ. ಬಳಿಕ ಗಾಯದ ಮೇಲೆ ಮೆಣಸಿನ ಪುಡಿ ಹಾಕಲಾಗಿದೆ, ಯುವತಿ ನೋವಿನಿಂದ ನರಳಲು ಶುರು ಮಾಡಿದಾಗ ಆಕೆಯ ಅಳು ಹೊರಗೆ ಕೇಳಬಾರದೆಂದು ಫೆವಿಕ್ವಿಕ್ನಿಂದ ಆಕೆಯ ಬಾಯಿ ಮುಚ್ಚಿದ್ದಾನೆ ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಕೇಸರಿ ಕಿಚ್ಚು, ತೆರೇಸಾ ಶಾಲೆ ವಿರುದ್ಧ ದಂಗೆ ಎದ್ದ ಹಿಂದೂ ಸಂಘಟನೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಸದ್ಯ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಕೈ ಅಧಿಕಾರಕ್ಕೆ ಬಂದರೆ ದೇಶದ್ಯಾಂತ ಜಾತಿ ಗಣತಿ: ರಾಹುಲ್ ಗಾಂಧಿ