ಬೀದರ್: ಲವ್ವರ್ ಮದುವೆ (Marriage) ದಿನದಂದೇ ಪ್ರೀತಿ ಮಾಡಿದ ಯುವಕ (Youth) ಶವವಾಗಿ ಪತ್ತೆಯಾಗಿರುವ ಘಟನೆ ಬೀದರ್ ನಗರ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ ನಡೆದಿದೆ.
ವೆಂಕಟೇಶ್ ಕುಮಾರ್ (22) ಮೃತ ಯುವಕ. ನಿಜಾಂಪುರ್ ಗ್ರಾಮದ ವೆಂಕಟೇಶ್ ಖಾಸಗಿ (Private) ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರೈಲ್ವೆ ಹಳಿ ಮೇಲೆ ವೆಂಕಟೇಶ್ ತುಂಡರಿಸಿದ್ದ ಸ್ಥಿತಿಯಲ್ಲಿ ಶವ ಪತೆಯಾಗಿತ್ತು. ಇದನ್ನೂ ಓದಿ: ನೇಹಾ ಹತ್ಯೆ ಖಂಡಿಸಿ ರಾಜ್ಯದ್ಯಂತ ಬಿಜೆಪಿ ಪ್ರತಿಭಟನೆ

ಕಳೆದ 3 ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಮದುವೆ ದಿನವೇ ವೆಂಕಟೇಶ್ ಕುಮಾರ್ ಅನ್ನು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನೇಹಾ ಕೋಲೆ ಕೇಸ್ ಸಿಐಡಿ ತನಿಖೆಗೆ ವಹಿಸುತೇವೆ: ಸಿಎಂ
ರೈಲ್ವೆ ಹಳಿ ಮೇಲೆ ತುಂಡರಿಸಿ ಬಿದ್ದಿದ್ದ ಶವದಿಂದ 1 ಕಿಮೀ ದೂರದಲ್ಲಿ ವೆಂಕಟೇಶ್ ಬೈಕ್ ಕೂಡ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ. ಕೊಲೆ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ವೆಂಕಟೇಶ್ ಸಂಬAಧಿಕರು ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಮಾಜಿ ಸೈನಿಕ ಹೋಗುತ್ತಿದ್ದ ಕಾರು ಪಲ್ಟಿ -ಸೈನಿಕ ಸೇರಿ ಓರ್ವ ಮಹಿಳೆ ಸಾವು, 2 ಮಕ್ಕಳ ಸ್ಥಿತಿ ಗಂಭೀರ
ಯುವತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಮೃತ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ನ್ಯೂಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 14 ಬಾರಿ ನೇಹಾಳನ್ನು ಇರಿದು ಕೊಂದ ಫ6ಯಾಜ್- ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ

