ಚಂಡಿಘಡ : ಆಮ್ ಆದಿ ಪಕ್ಷದ ಕಿಸಾನ್ ವಿಂಗ್ ಅಧ್ಯಕ್ಷ ತರ್ಲೋಚನ್ ಸಿಂಗ್ ಅಲಿಯಾಸ್ ಡಿಸಿ ಅವರನ್ನು ಪಂಜಾಬ್‌ನ ಖನ್ನಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಇಕೋಲಾಹ ಗ್ರಾಮದವರಾದ 56 ವರ್ಷದ ನಾಯಕ ತನ್ನ ಜಮೀನಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ನಾಯಕನ ಮತದೇಹ ರಸ್ತೆಬದಿಯಲ್ಲಿ ಬಿದ್ದಿದ್ದು, ಆತನ ಪುತ್ರ ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯ ವೈದ್ಯರು ಅವರು ಮತಪಟ್ಟಿರುವುದಾಗಿ ಘೋಷಿಸಿದರು.ಸಿಂಗ್ ಅವರ ಪುತ್ರ ಹರ್‌ಪ್ರೀತ್ ಸಿಂಗ್ ಅವರು ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಪ್ರತಿಯೊಂದು ಕೋನದಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೌರವ್ ಜಿಂದಾಲ್ ಹೇಳಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

