ತೆಲುಗಿನ ಖ್ಯಾತ ನಟ ಬಾಲಯ್ಯ (Balakrishna) ನಿನ್ನೆ ನಾಮ ಪತ್ರ ಸಲ್ಲಿಸಿದ್ದಾರೆ. ಟಿಡಿಪಿ (TDP) ಅಭ್ಯರ್ಥಿಯಾಗಿ ಈ ಬಾರಿ ಅವರು ಸ್ಪರ್ಧಿಸಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಪಣ ತೊಟ್ಟಿದ್ದಾರೆ.
ಬಾಲಯ್ಯು ಈಗಾಗಲೇ ಹಿಂದೂಪುರ (Hindupur) ಕ್ಷೇತ್ರದ ಹಾಲಿ ಶಾಸಕರು. ನಾಮಪತ್ರ ಪತ್ರವನ್ನು ಸಲ್ಲಿಸುವಾಗ ತಮ್ಮ ಆಸ್ತಿಯನ್ನು ಘೋಷನೆ ಮಾಡಿದ್ದಾರೆ. ಬಾಲಯ್ಯ ಅವರ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. ಅವರು ಸುಮಾರು 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದರೆ, 9 ಕೋಟಿ ರೂಪಾಯಿ ಸಲಾವನ್ನು ತೋರಿಸಿದ್ದಾರೆ. ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ
ಇನ್ನು ಅವರ ಪತ್ನಿ ವಸುಂಧರಾ 140 ಕೋಟಿ ರುಫಾಯಿ ಆಸ್ತಿ ಹೊಂದಿದ್ದು, ಅವರ ಪುತ್ರ ಮೋಕ್ಷಜ್ಙ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆಯಾಗಿ ಅವರ ಕುಟುಂಬದ ಆಸ್ತಿ 280.64 ಕೋಠಿ ರೂಪಾಯಿ ಘೋಷನೆ ಆಗಿದೆ. ಇದನ್ನೂ ಓದಿ: ಸಕ್ಕರೆ ನಾಡಲ್ಲಿಂದು ಕೈ-ಕಮಲ ಸಮಾವೇಶ