ಬೆಂಗಳೂರು : ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ (42) ಅವರು ನಿಧನರಾಗಿದ್ದಾರೆ. ದೀಪಕ್ ಅವರಿಗೆ ಸುಮಾರು ವರ್ಷ ವಯಸ್ಸಾಗಿತ್ತು. ದೀಪಕ್ ಅರಸ್ ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಸಂಜೆ 7 ಗಂಟೆ ಸುಮಾರಿಗೆ ದೀಪಕ್ ಅರಸ್ ನಿಧನರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ದೀಪಕ್ ಅರಸು ಅವರು ಎರಡು ಕಿಡ್ನಿ ವೈಫಲ್ಯವಾದರಿಂದ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಸದ್ಯ ದೀಪಕ್ ಅರಸು ಪಾರ್ಥಿವ ಶರೀರ ಆಸ್ಪತ್ರೆಯಲ್ಲಿದ್ದು, ಶೇಷಾದ್ರಿಪುರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಅಮೂಲ್ಯ ಸಹೋದರ ದೀಪಕ್ ಅರಸ್ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ದೀಪಕ್ ನಿರ್ದೇಶಿಸಿದ್ದಾರೆ.

