ಸ್ಯಾಂಡಲ್ವುಡ್ ನ ಸ್ವಾರ್ ದಂಪತಿಗಳಲ್ಲಿ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ತಾಯಿ ಆಗುತ್ತಿರುವ ಖುಷಿಯಲ್ಲಿ ಹರ್ಷಿಕಾ ದಂಪತಿ ವಿಭಿನ್ನವಾಗಿ ಮಾಡಿಸಿರುವ ಫೋಟೋಶೂಟ್ ಸಾಮಾಜಿಕ ಜಲಾತಾಣದಲ್ಲಿ ವೈಋಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಕೊಡಗಿನ ಬೆಡಗಿ ಹಷಿಕಾ ಅವರು ಕೊಡವ ಸಂಪ್ರದಾಯದ ಉಡುಗೆ ತೊಟ್ಟು ಕುಟುಂಬದೊಂದಿಗೆ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಮಗುವಿನ ಆಗಮನದ ಸುದ್ದಿ ಘೋಷಿಸಿದ್ದಾರೆ.

ಇದೇ ಅಕ್ಟೋಬರ್‌ನಲ್ಲಿ ಮಗು ಬರಲಿರುವ ಸಂತಸದಲ್ಲಿದ್ದಾರೆ ಹರ್ಷಿಕಾ ದಂಪತಿ. ಬಹುಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಕಳೆದ ವರ್ಷ ಆಗಸ್ಟ್ 24ರಂದು ಕೊಡಗಿನಲ್ಲೇ ಅವರ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದೀಗ ವರ್ಷದೊಳಗೆ ಮಗು ಆಗಮಿಸುವ ಸುದ್ದಿ ಕೊಟ್ಟಿದ್ದಾರೆ.
ಮದುವೆ ಬಳಿಕ ಹರ್ಷಿಕಾ ನಟನೆಯಿಂದ ಬ್ರೇಕ್ ಪಡೆದುಕೊಂಡು ಸಂಸಾರದ ಕಡೆ ಗಮನ ಕೊಟ್ಟಿದ್ದಾರೆ. ಮಗು ಜನಿಸಿದ ಬಳಿಕ ಮತ್ತೆ ಚಿತ್ರರಂಗದಲ್ಲಿ ಆ್ಯಕ್ವೀವ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಒಂದೇ ಊರು ಒಂದೇ ಸಂಪ್ರದಾಯದಲ್ಲಿ ಬೆಳೆದು ಬಂದವರು ಹರ್ಷಿಕಾ ಹಾಗೂ ಭುವನ್ ದಂಪತಿ. ಸ್ಯಾಂಡಲ್‌ವುಡ್‌ನ ಈ ತಾರಾಜೋಡಿ ಸದ್ಯಕ್ಕೆ ತಮ್ಮ ಜೀವನಕ್ಕೆ ಹೊಸ ಸದಸ್ಯನ ಆಗಮನದ ಖುಷಿಯಲ್ಲಿದೆ.

ಫ್ಯಾಶನ್ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಭುವನ್ ಮತ್ತು ಹರ್ಷಿಕಾ ಜೋಡಿ ಇದೀಗ ಪ್ರೆಗ್ನೆನ್ಸಿ ರಿವೀಲ್ ಫೋಟೋಶೂಟ್‌ನಲ್ಲೂ ಯೂನಿಕ್ ಕಾನ್ಸೆಪ್ಟ್ ಪ್ಲ್ಯಾನ್ ಮಾಡಿದ್ದು ವಿಶೇಷ. ಇಲ್ಲಿ ಕೊಡವರ ತುಂಬು ಕುಟುಂಬದ ಶೈಲಿಯನ್ನ ಅನಾವರಣ ಮಾಡಿದ್ದಾರೆ ದಂಪತಿ. ಕುಟುಂಬಸ್ಥರೆಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ನಿಂತು ಗರ್ಭಿಣಿ ಮನೆ ಸೊಸೆಯನ್ನ ಪರಿಚಯಿಸುವ ಶೈಲಿಯ ವಿಡಿಯೋ ಈಗ ನೋಡುಗರ ಗಮನ ಸೆಳೆಯುತ್ತದೆ.