ಬೆಂಗಳೂರು: ಕಿಡ್ನ್ಯಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಕಾನೂನು ಸಮರ ಎದುರಿಸುತ್ತಿರೋ ನಟ ಚಾಲೇಂಜಿಗ್ ಸ್ಟಾರ್ ದರ್ಶನ್ (Darshan) ಅವರು ಚಿತ್ರ ರಂಗದಿಂದ ಬ್ಯಾನ್ (Ban) ಆಗ್ತಾರಾ ಎಂದು ಕಾದು ನೋಡಬೇಕಿದೆ.
ಕನ್ನಡದ ಹೆಸರಾಂತ ನಟ ಮತ್ತು ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದವರು ತಮ್ಮ ನಿಜ ಜೀವನದಲ್ಲಿ ಹೀರೋ ಆಗಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟ ವಿನೋದ್ ರಾಜ್ ಗೆ ಅನಾರೋಗ್ಯ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆಳತಿ ಪವಿತ್ರ ಗೌಡ ಎ1 ಆರೋಪಿ ಆದರೆ ಇತ್ತ ದರ್ಶನ್ ಅವರು ಎ2 ಆರೋಪಿಯಾಗಿದ್ದಾರೆ. ಸದ್ಯ ಇದೀಗ ಡಿ ಗ್ಯಾಂಗ್ 6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದೆ.

ಚಾಲೇಂಜಿಂಗ್ ಸ್ಟಾರ್ ಕನ್ನಡದ 50 ಕ್ಕೂ ಅಧಿಕ ಸಿನಿಮಾನಳಲ್ಲಿ ನಡಿಸಿದ್ದು, ಇದೀಗ ಅವರ ಮೇಲೆ ಶಿಸ್ತುಕ್ರಮವನ್ನ ಚಿತ್ರರಂಗ ಕೈಗೊಳ್ಳುತ್ತಾ ಎಂಬುದು ಕಾದು ನೋಡಬೇಕಿದೆ. ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆಗೈದ “ಡಿ ಬಾಸ್ ಗ್ಯಾಂಗ್”
ಈ ಹಿಂದೆಯೇ ದರ್ಶನ್ ವರ್ತನೆ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್ ಮಾತನಾಡಿದ್ದರು. ಬಾಲಿವುಡ್ ನಟ ಸಂಜಯ್ ದತ್ ಕಾನೂನು ಸಮರ ಎದುರಿಸುತ್ತಿದ್ದಾಗ ಪೆರೋಲ್ ಮೇಲೆ ಬಂದು ಸಿನಿಮಾ ಶೂಟಿಂಗ್ ಮಾಡಿಕೊಡ್ತಿದ್ರು . ಅದೇ ಮಾರ್ಗವನ್ನ ನಡ ದರ್ಶನ್ ಕೂಡ ಅನುಸರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: 6 ದಿನಗಳ ಕಾಲ ದರ್ಶನ್ ಸೇರಿ 13 ಜನರಿಗೆ ಗ್ರಿಲ್

