ಕರಾವಳಿಯ ಕಬ್ಬಡ್ಡಿ ಆಟಗಾರನ ಕಾಮಕಾಂಡ
ನೂರಾರು ಹುಡುಗಿಯರ ಜೊತೆ ಸರಸ ಸಲ್ಲಾಪ
ಆರೋಪಿ ಸಯ್ಯದ್, ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್
ಕೊನೆಗೂ ಬಯಲಾಯ್ತು ಆರೋಪಿ ಸಯ್ಯದ್ ಬಣ್ಣ
ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಈಗ ಅದೇ ಸಾಲಿಗೆ ನಿಲ್ಲುವ ಕಾಲೇಜು ವಿದ್ಯಾರ್ಥಿ ಕರಾವಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಆತನ ಮೊಬೈಲ್‌ನಲ್ಲಿ ನೂರಾರು ಹುಡುಗಿಯರ ಜೊತೆ ಸರಸ ಸಲ್ಲಾಪದ ವಿಡಿಯೋಗಳು ಇವೆ ಎಂದು ಹೇಳಲಾಗುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಖಾಸಗಿ ಕಾಲೇಜು ವಿದ್ಯಾರ್ಥಿ ಹಾಗೂ ಕಬ್ಬಡ್ಡಿ ಆಟಗಾರನಾಗಿರುವ ಸಯ್ಯದ್ ಎನ್ನುವಾತನ ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ.
ಆತನ ಮೊಬೈಲ್‌ನಲ್ಲಿ ನೂರಾರು ಹುಡುಗಿಯರ ಜೊತೆ ಸರಸ ಸಲ್ಲಾಪದ ವಿಡಿಯೋಗಳಿವೆಯಂತೆ, ವಿದ್ಯಾರ್ಥಿನಿ-ಯುವತಿಯರ ಜೊತೆ ಸಾಕಷ್ಟು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.ಆರೋಪಿ ಸಯ್ಯದ್, ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ.
ಈ ವಿಚಾರ ಹಿಂದು ಸಂಘಟನೆ ಕಾರ್ಯಕರ್ತರಿಗೆ ತಿಳಿದ ಬಳಿಕ ಸೈಯದ್ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆ ಸರಸ-ಸಲ್ಲಾಪದ ವಿಡಿಯೋ ಪತ್ತೆಯಾಗಿವೆ. ಬಳಿಕ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಕಾರ್ಕಳ ನಿವಾಸಿ ಸೈಯದ್ ನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

