ಬ್ರೆಜಿಲ್: ಬ್ರೆಜಿಲ್ ನ ರಾಜಧಾನಿ ಸಾವೋ ಪೌಲೋ ನಗರದಲ್ಲಿ ವಿಮಾನವೊಂದು ಧರೆಗುರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ 62 ಮಂದಿ ಸಾವಿಗಿಡಾಗಿದ್ದಾರೆ. ಈ ವಿಮಾನವು ಬ್ರೆಜಿಲ್ ನ ಕ್ಯಾಸ್ಕಾವೆಲ್ ನಿಂದ ಸಾವೋಪೌಲೋ ನಗರಗಳ ನಡುವೆ ಸಂಚರಿಸುತ್ತಿತ್ತು. ಎಂದಿನಂತೆ ಕ್ಯಾಸ್ಕಾವೆಲ್ ನಿಂದ ಸಾವೋಪೌಲೋ ನಗರಕ್ಕೆ ತಲುಪಿ ಅಲ್ಲಿಂದ ಪುನಃ ಕ್ಯಾಸ್ಕಾವೆಲ್ ನಗರಕ್ಕೆ ಪ್ರಯಾಣ ಬೆಳೆಸುವಾಗ ಈ ಅಪಘಾತ ಸಂಭವಿಸಿದೆ. ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಸಾವೋಪೌಲೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದ ಜನನಿಬಿಡ ವಸತಿ ಪ್ರದೇಶಕ್ಕೆ ಹೋಗಿ ವಿಮಾನ ಬಿದ್ದಿದೆ.
ವೋಪಾಸ್ ಲಿನ್ಹಾಸ್ ಏರಿಯಾಸ್ ನಿರ್ವಹಿಸುತ್ತಿದ್ದ ATR-72 ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್‌ಗೆ ಹೋಗುತ್ತಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬ್ರೆಜಿಲಿಯನ್ ವಿಮಾನವು ಸಾವೊ ಪಾಲೊದಿಂದ ವಾಯುವ್ಯಕ್ಕೆ 80 ಕಿಲೋಮೀಟರ್ ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ.
ಬ್ರೆಜಿಲ್ ನಲ್ಲಿ ಅಪಘಾತಕ್ಕೀಡಾಗಿರುವ ವಿಮಾನದಲ್ಲಿದ್ದು 58 ಪ್ರಯಾಣಿಕರಿದ್ದರು. ಅವರ ಜೊತೆಗೆ ಇಬ್ಬರು ಪ್ರಯಾಣಿಕರು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯಿದ್ದರು. ಅವರೆಲ್ಲರನ್ನೊಳಗೊಂಡಿದ್ದ ವಿಮಾನ, ಸಾವೋ ಪೌಲೋ ನಗರದ ಗುವಾರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ಯಾಸ್ಕಾವೆಲ್ ಎಂಬ ನಗರದ ಕಡೆಗೆ ಪ್ರಯಾಣ ಬೆಳೆಸಿತ್ತು. ಆದರೆ, ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷಿದಿಂದಾಗಿ ಅದು ಸಾವೋ ಪೌಲೋ ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ಜನವಸತಿ ಪ್ರದೇಶದ ಮೇಲೆಯೇ ಹೋಗಿ ಬಿದ್ದಿದೆ.
ಬ್ರೆಜಿಲ್ ವಿಮಾನ ಅಪಘಾತದಲ್ಲಿ ಪ್ರಯಾಣ ನಡೆಸುತ್ತಿದ್ದವರು ಯಾರು ಬದುಕುಳಿದವರು ಇಲ್ಲ ಎಂದು ವಿನ್ಹೆಡೋ ಬಳಿಯ ವ್ಯಾಲಿನ್ಹೋಸ್‌ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಮಾನ ಪತನದಿಂದ ಸಮೀಪದ ಕಾಂಡೋಮಿನಿಯಂ ಕಾಂಪ್ಲೆಕ್ಸ್‌ನಲ್ಲಿರುವ ಮನೆಯೊಂದು ಪತನದೊಂಡಿದ್ದು, ಆದರೆ ಯಾವುದೇ ನಿವಾಸಿಗಳು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

