ಚಾಮರಾಜನಗರ: ಮೂಲಭೂತ ಸೌಕರ್ಯ ಕೊರತೆ ಆರೋಪಿಸಿ ಮಹದೇಶ್ವರ ಬೆಟ್ಟ (Mahadeshwara Hills) ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು (Villagers) ಮತದಾನದಿಂದ (Voting) ದೂರ ಉಳಿದಿದ್ದಾರೆ.
ಇಂಡಿತನತ್ತ, ತೇಕಣೆ, ಮೆಂದಾರೆ ಹಾಗೂ ತುಳಸೀಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದಾರೆ (Election Boykott) . ಪಟಸಲನತ್ತ ದರಾಮದಲ್ಲಿ 85 ಮತದಾರರ ಪೈಕಿ ಇಬ್ಬರು (Two) ಮಾತ್ರ ಮತದಾನ ಮಾಡಿದ್ದಾರೆ. ಗ್ರಾಮದಲ್ಲಿ ಉಳಿದ ಯಾವುದೇ ಮತದಾರರು ಈ ವೆರೆಗೂ ಮತಗಟ್ಟೆಯತ್ತ ಸುಳಿದಿಲ್ಲ. ಕನಿಷ್ಠ ಮೂಲಭೂತ ಸೌಕರ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ಇದೆ: ಸಿದ್ದರಾಮಯ್ಯ
ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣ ಮರಿಚೀಕೆಯಾಗಿದೆ ಎಂದು ಆರೋಪ ಹೊರಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮತದಾನ ಮಾಡಲೇಬಾರದು ಎಂದು ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದಾರೆ. ಇದನ್ನೂ ಓದಿ: ಹಲವಾರು ದೇಗುಲಗಳಲ್ಲಿ ಪೂಜೆ ಮಾಡಿದ ಬಳಿಕ ಮತ ಚಲಾಯಿಸಿ ಮಾಜಿ ಪ್ರಧಾನಿ ಹೆಚ್‌ಡಿಡಿ

