ಪುಷ್ಪ ಮೊದಲ ಭಾಗದ ಯಶಸ್ಸಿನ ಬಳಿಕ ಈ ಸಿನಿಮಾ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಹುಟ್ಟಿದೆ. ಇದೀಗ ʻಪುಷ್ಪ 2; ದಿ ರೂಲ್ʼ ಚಿತ್ರದ ಟ್ರೇಲರ್ (Pushpa 2 The Rule Trailer) ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
02:48 ಸೆಕೆಂಡ್ ಇರುವ ಈ ಚಿತ್ರದ ಟ್ರೇಲರ್ ಸದ್ಯಕ್ಕೆ ಎಲ್ಲರ ಚಿತ್ತ ಕದ್ದಿದೆ. ಅದರಲ್ಲಿಯೂ ಮಾಸ್ ಪ್ರೇಕ್ಷಕರು ಪುಷ್ಪರಾಜ್‌ಗೆ ಬಹುಪರಾಕ್ ಹಾಕುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಸ್ಟೈಲ್ ಕಂಡು ಸ್ಮೈಲ್ ಮಾಡುತ್ತಿದ್ದಾರೆ. ಸ್ವ್ಯಾಗ್‌ಗೆ ಸಲಾಂ ಹೊಡೆಯುತ್ತಿದ್ದಾರೆ.
ಬಿಹಾರದ ಪಟ್ನಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ‘ಪುಷ್ಪ 2’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲು ಅರ್ಜುನ್ ಅವರ ಬಗ್ಗೆ ಉತ್ತರ ಭಾರತದ ಜನರಿಗೆ ಕೂಡ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ವೀವ್ಸ್ ವಿಚಾರದಲ್ಲಿ ಕೇವಲ ಐದು ನಿಮಿಷದಲ್ಲಿ ನಾಲ್ಕು ಲಕ್ಷದ ಗಡಿಯನ್ನು ದಾಟುವ ಮೂಲಕ ಯೂಟ್ಯೂಬ್‌ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇಂತಹದ್ದೊಂದು ಸಾಧನೆಯನ್ನು ಮಾಡಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಇನ್ನೂ ಟ್ರೇಲರ್ ಬಿಡುಗಡೆಯಾದ ಒಂದು ಘಂಟೆಯಲ್ಲಿ ಈ ವೀಕ್ಷಣೆಯ ಸಂಖ್ಯೆ 3,871,782 ದಾಟಿದೆ. ಎರಡು ಘಂಟೆಯಲ್ಲಿ ತೆಲುಗು ಟ್ರೇಲರ್ 5.66 ಮಿಲಿಯನ್ ವೀಕ್ಷಣೆಯನ್ನು ಕಂಡಿದೆ
ಇನ್ನೂ ಪುಷ್ಪ 2 ನೋಡುವ ಆತುರ ಮತ್ತು ಕಾತುರ ಉತ್ತರ ಭಾರತದವರಿಗೂ ಕೂಡ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಬಿಡುಗಡೆಯಾದ ಒಂದು ಗಂಟೆಯಲ್ಲಿ ಹಿಂದಿ ಟ್ರೇಲರ 2.9 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಹದಿಮೂರು ಘಂಟೆಯ ನಂತರ ಈ ಸಂಖ್ಯೆ 24,659,583ಕ್ಕೆ ತಲುಪಿದೆ.
ಟ್ರೈಲರ್‌ನಲ್ಲಿ ಅಲ್ಲು ಅರ್ಜುನ್ ಜೊತೆಗೆ ಫಹಾದ್ ಫಾಸಿಲ್ ಖದರ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ರಶ್ಮೀಕಾ ಮಂದಣ್ಣ ಕೂಡ ಶೈನ್ ಆಗಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಕೇವಲ ತೆಲುಗು ಮಾತ್ರ ಅಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಪುಷ್ಪ 2 ಟ್ರೇಲರ್ ಸದ್ದು ಜೋರಿದೆ. ಇನ್ನೂ ಹಿಂದಿಯಲ್ಲಿ ಪುಷ್ಪ ಮೊದಲ ಭಾಗವನ್ನು ವಿತರಣೆ ಮಾಡಿದ್ದ ರವೀನಾ ಟಂಡನ್ ಅವರ ಪತಿ ಅನಿಲ್ ಥಡಾನಿ ಪುಷ್ಪ 2 ಚಿತ್ರವನ್ನು ಕೂಡ ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ. ಸದ್ಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಲಿದೆ.

