ಬೆಂಗಳೂರು: ಅನಾಮಿಕರು ಹಸುಗೂಸನ್ನು (Just born Baby) ರಸ್ತೆ ಬದಿಗೆ ಎಸೆದು ಹೋದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಹುಟ್ಟಿ ಕೆಲವೇ ಗಂಟೆಯಾಗಿರುವ ಹಸುಗೂಸನ್ನು ಯಲಹಂಕದ (Yelhanka) ಅಟ್ಟೂರು ಬಸ್ ನಿಲ್ದಾಣದ ಬಳಿ ಮಗುವನ್ನು ರಸ್ತೆ ಬದಿಗೆ ಎಸೆದು ಹೋಗಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: ರೇವಣ್ಣ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ
ಬಸ್ ನಿಲ್ದಾಣದ ಬಳಿ ಇರುವ ಗೂಡ್ಸ್ ಸ್ಟ್ಯಾಂಡ್ ಬಳಿ ಶಿಶು ಪತ್ತೆಯಾಗಿದೆ. ಮಗು ಅಳುತ್ತಿದ್ದ ಶಬ್ಧ ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಮಗುವಿಗೆ ಯಲಹಂಕದ ಈಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: A2 ಆರೋಪಿ ರೇವಣ್ಣ ಬಂಧನ ಅನುಮಾನಾಸ್ಪದಾ
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಯಲಹಂಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದಿನೇ ದಿನೇ ಹೆಚ್ಚಾಗುತಿದೆ ಡೆಂಗ್ಯೂ ಪ್ರಕರಣಗಳು

