‘ವಿಕ್ರಾಂತ್ ರೋಣ’ ಸಿನಿಮಾ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಸುದೀಪ್ ಜತೆ ಹೊಸ ಸಿನಿಮಾ ಮಾಡುತ್ತಿದ್ದು, ಅದಕ್ಕಾಗಿ ಕಿಚ್ಚ ಸುದೀಪ್ ಈಗಾಗಲೇ ತಯಾರಿ ನಡೆಸಿದ್ದಾರೆ.
ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ರವರ ಹುಟ್ಟುಹಬ್ಬ ಸೆಪ್ಟೆಂಬರ್ 2 ಅಂದು ಅಭಿಮಾನಿಗಳಿಗಾಗಿ ಒಂದು ಬಿಗ್ ಅನೌನ್ಸ್ಮೆಂಟ್ ಹೊರಬರಲಿದೆ. ಈ ಕುರಿತು ಅನುಪ್ ಭಂಡಾರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದು ಕಿಚ್ಚ ಸುದೀಪ್ ಜೊತೆ ಮತ್ತೆ ಕೆಲಸ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಸುದೀಪ್ ಹುಟ್ಟುಹಬ್ಬ ಸೆಪ್ಟೆಂಬರ್ 2 ರಂದು ಕಿಚ್ಚನ ಫ್ಯಾನ್ಸ್ ಸಂಭ್ರಮಿಸಲು ಸಜ್ಜಾಗಿದ್ದು, ಕಿಚ್ಚ ಸುದೀಪ್ ಗೆ ಮತ್ತೆ ಆಕ್ಷನ್ ಕಟ್ ಹೇಳಲಿರುವ ಅನೂಪ್ ನಿರ್ದೇಶನದ “ಬಿಲ್ಲ ರಂಗ ಭಾಷಾ” ಚಿತ್ರದ ಭರ್ಜರಿ ಅನೌನ್ಸ್ಮೆಂಟ್ ಹೊರಬರಲಿದೆ.
ಸುದೀಪ್ ಬರ್ತಡೇ ಗಿಫ್ಟ್ ರೂಪದಲ್ಲಿ ನೀಡುತ್ತಿರುವ ಈ ಹೊಸ ಸಿನಿಮಾ ಅನೌನ್ಸ್ಮೆಂಟ್ ಆಗಿದ್ದು , ದ ಮೆನ್ ಇನ್ ಬ್ಲಾಕ್ ವಿಲ್.. ಬೀ ರೈಟ್ ಬ್ಯಾಕ್ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.

