ಬೆಂಗಳೂರು : ಆಟೋ ಚಾಲಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾನೆ. ಬೆಂಗಳೂರಲ್ಲಿ ಮತ್ತೆ ಕ್ರಿಪ್ಟೋ ಕರೆನ್ಸಿ ಸದ್ದು ಮಾಡುತ್ತಿದ್ದು, ಆಟೋ ಚಾಲಕನೊಬ್ಬ ಕ್ರಿಪ್ಟೋ ಕರೆನ್ಸಿ ಸ್ವೀಕರಿಸಲಾಗುವುದು ಎಂಬ ಪೋಸ್ಟರ್ ನ್ನು ತನ್ನ ಆಟೋದಲ್ಲಿ ಅಂಟಿಸಿಕೊಂಡು ಸುದ್ದಿಯಾಗಿದ್ದಾನೆ.
ಆ ಆಟೋದಲ್ಲಿ ಪ್ರಯಾಣಿಸಿದ್ದ ಘರಿಮ ಶರ್ಮಾ ಎಂಬುವರು ಆಟೋ ಚಾಲಕ “We Accept crypto Currency” ಎಂದು ಬರೆದುಕೊಂಡಿದ್ದನ್ನು ಈ ಬಗ್ಗೆ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಏರ್ಪಟ್ಟಿದೆ.

