ಚಿಕ್ಕೋಡಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಹಜರತ್ ಜುನ್ನೇದ ಬಾಗ್ದಾದ ಶರೀಫ, ಸೌದಿ ಅರೇಬಿಯಾ ಶರೀಫ್ ಹಾಗೂ ಗುಲ್ಬರ್ಗಾದ ಸಿರಾಜೋದ್ದಿನ ಶರೀಫ್ ಭೇಟಿ ನೀಡಿದರು. ಇವರು ಆಗಮಿಸುತ್ತಿದ್ದಂತೆ ಮುಸ್ಲಿಂ ಬಾಂಧವರು ಯುವಕರು ಬೈಕ್ ರ್ಯಾಲಿ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು.
ಮೊದಲು ನೂತನವಾಗಿ ನಿರ್ಮಿಸಿರುವ ಹ.ಮಾಸಾಹೇಬಾ ವೃತ್ತದಲ್ಲಿ ಬಾಗ್ದಾದ ಶರೀಫರು ಧ್ವಜಾರೋಹಣ ನೆರವೇರಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಮಾಸಾಹೇಬಾ ದರ್ಗಾಕ್ಕೆ ತೆರಳಿ ದರ್ಶನ ಪಡೆದು ಜಹೂರ ರೋಹಿಲೆಯವರ ಮನೆಗೆ ತೆರಳಿ ಭೋಜನ ಸವಿದು ವಿಶ್ರಮಿಸಿದರು. ನಂತರ ಸಂಜೆ 6ಗಂಟೆಗೆ ಹ.ಮಾಸಾಹೇಬಾ ದರ್ಗಾದಲ್ಲಿ ಹಮ್ಮಿಕೊಂಡಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಗುಲ್ಬರ್ಗಾದ ಹ.ಶಿರಾಜುದ್ದೀನ ಶರೀಫ ಮಾತನಾಡಿ ಇವತ್ತು ಕುಡಚಿ ಪಟ್ಟಣಕ್ಕೆ ಆಗಮಿಸಿದ ಹ.ಜುನ್ನೇದಿ ಬಾಗ್ದಾದರ ಸಂತಾನ ಕುಡಚಿಯಲ್ಲಿ ಇದ್ದು ಹ.ಶೇಖ ಸಿರಾಜುದ್ದೀನರನ್ನು ನಂಬಿದ ಜನತೆಯ ಭೇಟಿಗಾಗಿ ಹಾಗೂ ಅವರಿಗೆ ಜಗತ್ತಿನಾದ್ಯಂತ ಇರುವ ಜುನ್ನೇದಿಯ ಒಂದು ಸಂತಾನವನ್ನು ಒಗ್ಗೂಡಿಸುವ ಉದ್ದೇಶದಿಂದ ಮುಂದೆಯೂ ಹ.ಬೊಗ್ದಾದಿ ಮಿಶನ್ ಕಾರ್ಯವನ್ನು ಮುಂದುವರೆಸುವ ಕೆಲಸದಲ್ಲಿ ನಿರತರಾಗಿಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸರ್ಫರಾಜ್ ಕರೀಮಖಾನ,ಸಹೇಬಪೀರ ರೆಡ್ಡಿ, ಬಾಬಾಜಾನ ಅಜೀಜಖಾನ, ಮೌಲಾಲಿ ವಾಟೆ, ಅಮೀನ ವಾಟೆ, ಯಾಶೀನ ಚಮನಶೇಖ, ಜಹೂರ ಸಂದರವಾಲೆ, ಮೌಲಾನಾಗಳು,ಸಮಾಜದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಎಂ. ಕೆ. ಸಪ್ತಸಾಗರ

