ರಾಂಚಿ: ಜಾರ್ಖಂಡ್ (Jharkhand) ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕನನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಜ.31 ರಂದು ಬಂಧಿಸಿತ್ತು. ಇದನ್ನೂ ಓದಿ: ಮಳೆಗೆ ಮನೆಗೆ ನುಗ್ಗಿದ ನೀರು – ಎಸ್ಪಿ ಸಂಸದರನ್ನು ಎತ್ತಿಕೊಂಡು ಕಾರಿನಲ್ಲಿ ಕುಳ್ಳಿರಿಸಿದ ಸಿಬ್ಬಂದಿ: ವಿಡಿಯೋ ವೈರಲ್
ನಕಲಿ ದಾಖಲೆ ಸೃಷ್ಟಿಸಿ ರಾಂಚಿಯಲ್ಲಿ ಕೋಟ್ಯಂತರ ಮೌಲ್ಯದ 8.86 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ (Land Scam Case) ಯೋಜನೆ ಹೊಂದಲಾಗಿತ್ತು ಎಂದು ಇಡಿ ಆರೋಪಿಸಿದೆ.
ಕಳೆದ ತಿಂಗಳು ಎರಡು ಬಾರಿ ಹಿನ್ನಡೆಯ ನಂತರ ಇಂದು ಜಾಮೀನು ಆದೇಶ ಬಂದಿದೆ. ಮೊದಲಿಗೆ, ರಾಂಚಿ ವಿಶೇಷ ನ್ಯಾಯಾಲಯವು ಸೊರೇನ್ ಜಾಮೀನನ್ನು ನಿರಾಕರಿಸಿತ್ತು.ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಟ್ವಿಸ್ಟ್ -ಗಂಭೀರ ಆರೋಪ ಮಾಡಿದ ಆರೋಪಿ ಸತ್ಯನಾರಾಯಣ್ ವರ್ಮಾ
ಪ್ರಕರಣ ಸಂಬಂಧ ಇಡಿ ವಿಚಾರಣೆ ಎದುರಿಸಿದ್ದ ಹೇಮಂತ್ ಸೊರೇನ್ ಜನವರಿ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರನ್ನು ಬಂಧಿಸಲಾಯಿತು.

