ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತವಾದ ಮಾಲ್ಲೇಶ್ವರಂನಲ್ಲಿರುವ (Malleshwaram) ಮಂತ್ರಿ ಮಾಲ್ (Mantri Mall) ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡಿರುವ ಹಿನ್ನಲೆ ಬಿಬಿಎಂಪಿ (BBMP) ಬೆಳ್ಳಂಬೆಳಗ್ಗೆಯೇ ಬೀಗ ಹಾಕಿ ಶಾಕ್ ನೀಡಿದೆ.
ಈ ಹಿಂದೆಯೂ 8 ಬಾರಿ ಈ ಮಾಲ್ಗೆ ಬಿಬಿಎಂಪಿ ಬೀಗ ಹಾಕಿತ್ತು. ಆದರೆ ಮಾಲ್ನವ್ರು ಕೋರ್ಟ್ ನ ಮೊರೆ ಹೋಗಿ ಬೀಗ ತೆಗೆಸಿ ವ್ಯವಹಾರ ಮಾಡುತ್ತಿದ್ದರು. ಇಂದಿನಿಂದ ಸೋಮವಾರದವರೆಗೂ ಸಾಲು ಸಾಲು ರಜೆ ಇರುವುದರಿಂದ ವಿಕೇಂಡ್ನಲ್ಲಿ ಹಚ್ಚಿನ ಜನರು ಬರುತ್ತಿದ್ದರು.ಇದನ್ನೂ ಓದಿ:ಬೆಲ್ಜಿಯಂನಲ್ಲಿ 14 ವರ್ಷದ ಬಾಲಕಿ ಮೇಲೆ 10 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಆದರೆ ಇದೀಗ ಉಳಿಸಿಕೊಂಡಿರುವ ತೆರೆಗೆಯನ್ನ ಪಾವತಿಸಿದರೆ ಮಾತ್ರ ಮಾಲ್ನ ಬೀಗ ಓಪನ್ ಮಾಡಲಾಗುತ್ತೆ.ಇದನ್ನೂ ಓದಿ:ಜಿಂದಲ್ ಕಾರ್ಖೆನೆಯಲ್ಲಿ ಅಪಘಾತ- ನೀರಿಗೆ ಬಿದ್ದು 3 ಸಾವು
ಇಂದು ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳ ತಂಡ ಬಿಗಿ ಭದ್ರತೆಯೊಂದಿಗೆ ಆಗಮಿಸಿ ಮಾಲ್ಗೆ ಬೀಗ ಹಾಕಿದ್ದಾರೆ. ಇನ್ನು ಮಾಲ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಂದು ಕಾಯುತ್ತಿದ್ದಾರೆ. ಮಾಲ್ಹೆ ಬೀಗ ಹಾಕಿರುವುದನ್ನು ನೋಡಿ ಹೊರಗಡೆಯೇ ನಿಂತಿದ್ದಾರೆ. ಇದನ್ನೂ ಓದಿ: ಉತ್ತರಪ್ರದೇಶದ ಅಕ್ಬರ್ಪುರ ಹೆಸರು ಬದಲಾವಣೆ ಸುಳಿವು ಕೊಟ್ಟ ಯೋಗಿ
