ಬೆಂಗಳೂರು : ಸಿಲಿಕಾನ್ ಸಿಟಿ ಜನರೇ ಮೊಬೈಲ್ನಲ್ಲಿ ಈ ಫೈಲ್ ಡೌನ್ ಲೋಡ್ ಮಾಡೋ ಮುನ್ನ ಎಚ್ಚರ. ಹೊಸದಾದ ರೀತಿಯಲ್ಲಿ ವಂಚಕರು ನಿಮ್ಮ ಮೊಬೈಲ್ನ್ನು ಹ್ಯಾಕ್ ಮಾಡಲು ಮುಂದಾಗಿದ್ದಾರೆ. ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ವಂಚನೆಗಿಳಿಡಿರುವ ಕಿರಾತಕರು ಎಪಿಕೆ ಫೈಲ್ ಮೂಲಕ ಅನೇಕ ಜನರಿಗೆ ವಂಚಿಸುತ್ತಿದ್ದಾರೆ. ಎಲೆಕ್ಟ್ರಿಸಿಟಿ ಬಿಲ್ ಹೆಸರಲ್ಲಿ ಎಪಿಕೆ ಫೈಲ್ ನ್ನು ಗ್ರಾಹಕರು ಡೌನ್ಲೋಡ್ ಮಾಡಿದ ಕೂಡಲೇ ಬ್ಯಾಂಕ್ ಖಾತೆಗೆ ಕನ್ನ ಹಾಕಿ ವಂಚಿಸುತ್ತಿದ್ದಾರೆ.
ನಿಮ್ಮ ಮೊಬೈಲ್ಗೆ ಯಾವುದೇ ಓಟಿಪಿ ಬರಲ್ಲ ಹಾಗೂ ಲಿಂಕ್ ಸಹಾಯವಿಲ್ಲದೇ ನಿಮ್ಮ ಮೊಬೈಲ್ನ್ನು ಹ್ಯಾಕ್ ಮಾಡಲಾಗುತ್ತಿದೆ. ಬೆಸ್ಕಾಂನ ಜಲಮಂಡಳಿ ಹೆಸರಲ್ಲಿ ಕಿರಾತಕರು ವಂಚನೆಗಿಳಿದಿದ್ದಾರೆ. ಬೆಸ್ಕಾಂ, ನೀರಿನ ಬಿಲ್ ಪಾವತಿಸುವಂತೆ ನಿಮ್ಮ ಮೊಬೈಲ್ಗೆ ಮೆಸೇಜ್ ಬರುತ್ತದೆ. ಈ ಸಂದೇಶ ಎಲೆಕ್ಟಸಿಟಿ ಬಿಲ್ ಹೆಸರಲ್ಲಿ ನಿಮ್ಮ ವಾಟ್ಸಾಪ್ ನಂಬರ್ ಗೆ ಎಪಿಕೆ ಫೈಲ್ ರೂಪದಲ್ಲಿ ಕಳಿಸಲಾಗುತ್ತದೆ. ಅದನ್ನು ಡೌನ್ಲೋಡ್ ಮಾಡಿದರೆ ಸಾಕು ನಿಮ್ಮ ಮೊಬೈಲ್ ಹ್ಯಾಕ್ ಆಗುತ್ತೆ.
ವಂಚಕರು ಕೆಲ ಕಂಪನಿಗಳ ಲೋಗೋವನ್ನು ವಾಟ್ಸಾಪ್ ಡಿಪಿಗೆ ಬಳಸಿಕೊಂಡು ಎಪಿಕೆ ಫೈಲ್ಗಳನ್ನು ಫಾರ್ವಡ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ನೀವೇನಾದರೂ ಮೈಮರೆತರೆ ಬ್ಯಾಂಕ್ ಖಾತೆಗೆ ಕನ್ನ ಹಾಕೋದು ಗ್ಯಾರಂಟಿಯಾಗಿದೆ.
ಎಪಿಕೆ ಫೈಲ್ ಡೌನ್ಲೋಡ್ ಮಾಡಿಕೊಂಡ ಕೂಡಲೇ ನಿಮ್ಮ ಮೊಬೈಲ್ ಹ್ಯಾಕ್ ಆಗುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ಖಾತೆಯಲ್ಲಿನ ಹಣ ಸೈಬರ್ ವಂಚಕರ ಪಾಲಾಗಲಿದೆ. ಈ ರೀತಿಯ ಎಪಿಕೆ ಅಪ್ಲಿಕೇಷನ್ ಮತ್ತು ಫೈಲ್ ಗಳು ನಿಮ್ಮ ಮೊಬೈಲ್ಗೆ ಬಂದರೆ ಅದನ್ನು ಬಳಸಬೇಡಿ ಎಂದು ಸೈಬರ್ ಕ್ರೈಂ ಪೊಲೀಸರು ಸಲಹೆ ನೀಡಿದ್ದಾರೆ.