ಸತತ 26 ವರ್ಷಗಳ ಸುಧೀರ್ಘ ಪತ್ರಿಕೋದ್ಯಮದ ಅನುಭವ, ರಾಜ್ಯ ವ್ಯಾಪಿ ಪತ್ರಿಕಾ ಬಳಗದ ನೆಚ್ಚಿನ ಶಕ್ತಿ ಹಾಗೂ ಅದರ ಅಭಿವ್ಯಕ್ತಿ ಬಂಗ್ಲೆ ಮಲ್ಲಿಕಾರ್ಜುನ್ ಅವರು ನಾಡು ಕಂಡಂತಹ ಶ್ರೇಷ್ಠ ಪತ್ರಿಕ ರಂಗದ ನೇತಾರ ಹಾಗೂ 2014ರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಇವರು ಕರ್ನಾಟಕ ರಾಜ್ಯಾದ್ಯಂತ ನೆಲೆಸಿರುವ ಪತ್ರಿಕೋದ್ಯಮದ ಬಂಧುಗಳ ನಾಡಿಮಿಡಿತವನ್ನು ಬಹುವಾಗಿ ಬಲ್ಲವರು.
ಒಬ್ಬ ಪತ್ರಕರ್ತನ, ವಿತರಕನ,ಸಂಪಾದಕನ,ಪತ್ರಿಕೋದ್ಯಮ ನಡೆಸುವ ಎಲ್ಲಾ ಭೇಗೆಗಳನ್ನು ಬಲ್ಲ ಇವರು ಪತ್ರಿಕಾ ವಲಯದ ಕ್ರಾಂತಿಗೆ ಪತ್ರಕರ್ತನ ನೆರವಿಗೆ, ಪತ್ರಿಕಾ ಸಮುದಾಯದ ಏಳಿಗೆಗೆ ಕಂಕಣಬದ್ಧರಾಗಿ ದಿನಾಂಕ 25-2-2022 ರಂದು ಅಖಾಡಕ್ಕಿಳಿದ ಈತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸ್ಥಾಪಿಸಿ ಕಾಲಿಗೆ ಚಕ್ರಕಟ್ಟಿದವರಂತೆ ತಿರುಗಿ ಸರಿಸುಮಾರು 3000 ಪತ್ರಕರ್ತರನ್ನು ತಮ್ಮ ಸಂಘಟನೆಯತ್ತ ತಂದಿರುವದು ಇವರ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ.
ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಎರಡು ಬಾರಿ ಪ್ರತಿಭಟಿಸಿ ಸರ್ಕಾರವೆ ತಮ್ಮತ್ತ ತಿರುಗುವಂತೆ ಮಾಡಿದ ಇವರು ಮತ್ತೆ ಫ್ರೀಡಂ ಪಾರ್ಕ್ ನಲ್ಲಿ ಪತ್ರಿಕೋದ್ಯಮದ ಸಮಸ್ಯೆಯ ಪರವಾಗಿ ಎರಡು ಬಾರಿ ಸಿಡಿದೆದ್ದ ಇವರ ಮನೋಬಲಕ್ಕೆ ಇವರೇ ಸಾಕ್ಷಿಯಾಗಿದ್ದಾರೆ.
ನೆಲಮಂಗಲದಲ್ಲಿ ವಿಸ್ತರಿಸಿರುವ ಈ ಸಂಘಟನೆ ಯ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ಡಿ ಸಿದ್ದರಾಜು, ಅರವತ್ತು ಮೂರರ ಹರಯದಲ್ಲೂ 36 ಯುವಕನಂತೆ ಮಿಂಚಿನ ಸಂಚಾರಗೈದು 23.08.2024 ರಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಮಾವೇಶವನ್ನು ಯಶಸ್ವಿಗೊಳಿಸಿದ್ದು ಇವರ ಜಿಲ್ಲಾಧ್ಯಕ್ಷ ಪದವಿಗೆ ಅತ್ಯತ್ಕೃಷ್ಟ ನ್ಯಾಯವನ್ನು ಒದಗಿಸಿದಂತಾಗಿದೆ.
ಪತ್ರಿಕಾ ವಿತರಕರಿಂದ ಹಿಡಿದು ಪತ್ರಿಕೋದ್ಯಮದ ದಿಗ್ಗಜರನ್ನ ಒಂದೆಡೆ ಕಲೆಹಾಕಿ ಪತ್ರಿಕಾ ಸಮುದಾಯದ ಬಹುದೊಡ್ಡ ಉತ್ಸವವನ್ನು ಮಾಡಿದ ಡಿ ಸಿದ್ದರಾಜುರವರ ಉತ್ಸಾಹಕ್ಕೆ ಅಭೂತಪೂರ್ವ ವೇದಿಕೆ ಸಾಕ್ಷಿಯಾಯಿತು. ಪವಾಡ ಶ್ರೀ ಬಸವಣ್ಣ ದೇವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿ ಶುರುವಾದ ಕಾರ್ಯಕ್ರಮ ಬಂಗ್ಲೆ ಮಲ್ಲಿಕಾರ್ಜುನ್ ರವರ ಪ್ರಾಸ್ತಾವಕ ನುಡಿ ಹಾಗೂ ಜಗಳೂರು ಲಕ್ಷ್ಮಣ್ ರವರ ಆಶಯ ನುಡಿಯ ಜೊತೆಗೆ,ಮಾನ್ಯ ಎಮ್ ನಾರಾಯಣ ಗೌಡರು ಹಾಗೂ ನಗರಸಭ ಅಧ್ಯಕ್ಷರಾದ ಪೂರ್ಣಿಮಾ ಸುಗ್ಗರಾಜುರವರ ಉಪಸ್ಥಿತಿಯಿಂದ ಕಾರ್ಯಕ್ರಮವು ರಂಗೇರಿತು.
ಜಿಲ್ಲಾ ಪತ್ರಕರ್ತರ ಸಮಾವೇಶದ ವಿಚಾರ ಸಂಕಿರಣ ಕೇಳುಗರ ಜ್ಞಾನವನ್ನ, ಆಲಿಸುವರ ತಿಳುವಳಿಕೆಯನ್ನ ಹಾಗೂ ಜ್ಞಾನಿಗಳ ಮನದಿ ಚ್ಛೆಯನ್ನ ತಣಿಸುವಹಾಗಿತ್ತು ಇದಕ್ಕೆ ಕಾರಣವಾಗಿದ್ದು ವೇದಕೆಯಲ್ಲಿದ್ದ ಮಹಾ ದಿಗ್ಗಜರ ಉಪಸ್ಥಿತಿ.
ಸತತ 55 ವರ್ಷಗಳ ಸುದೀರ್ಘ ಪತ್ರಿಕೋದ್ಯಮದ ಅನುಭವವನ್ನು ಹೊಂದಿರುವ ಸನ್ಮಾನ್ಯ ಶ್ರೀ ವೆಂಕಟನಾರಾಯಣರವರು ಪತ್ರಿಕೋದ್ಯಮದ ರಸ ಋಷಿ ಅಥವಾ ಪತ್ರಿಕೋದ್ಯಮದ ದೈವ ಎಂದರೆ ತಪ್ಪಾಗಲಾರದು.ನಾಡು ಕಂಡಂತಹ ಶ್ರೇಷ್ಠ ರಾಜಕೀಯ ಮತ್ಸದ್ದಿಗಳಾದ ನಿಜಲಿಂಗಪ್ಪನವರು, ದೇವರಾಜ ಅರಸು, ರಾಮಕೃಷ್ಣ ಹೆಗಡೆ,ಬಂಗಾರಪ್ಪ, ಎಸ್ ಎಂ ಕೃಷ್ಣ, ಇಂತಹವರ ಆಂತರಿಕ ವಲಯದಲ್ಲಿ ಗುರುತಿಸಿಕೊಂಡ ನಾರಾಯಣರಾವ್ ಅವರು ಪತ್ರಿಕೋದ್ಯಮ ಧರ್ಮಕ್ಕೆ ಅಪವಾದ ಬರದಂತೆ ನಡೆದವರು.
ಅಂದಿನ ಮುಖ್ಯಮಂತ್ರಿಗಳಾದ ಎಸ್.ಎಮ್. ಕೃಷ್ಣ ರವರಿಂದ ಜಾರಿಯಾದ ನಿವೇಶನವನ್ನು ಇಂದಿಗೂ ಕೂಡ ಖಾಲಿಯಿಟ್ಟು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವ ಇವರ ನೈತಿಕ ದಾಡ್ಯತೆ, ಪತ್ರಿಕೋದ್ಯಮಕ್ಕೆ ಓರ್ವ ನಿರ್ಭಿತ ಪತ್ರಕರ್ತನನ್ನು. ಅನುಭವಿಯನ್ನು. ಜ್ಞಾನದ ಮೂಸೆಯಲ್ಲಿ ಹದವಾದ ವ್ಯಕ್ತಿಯನ್ನು ದೈವವೇ ನಾಡಿಗೆ ಅನುಗ್ರಹಿಸಿದಂತಿದೆ.
ಸರಿಸುಮಾರು 3000 ಪತ್ರಕರ್ತರನ್ನು ಉದ್ಯಮಕ್ಕೆ ನೀಡಿರುವ ಇವರು 12 ಪತ್ರಿಕೆಗಳಿಗೆ ಸಂಪಾದಕರಾಗಿ ಕೆಲಸವನ್ನ ನಿರ್ವಹಿಸಿದ್ದು ದಣಿವರಿಯದ ದೊರೆಯಾಗಿದ್ದಾರೆ.ಹಾಗೆ ವೇದಿಕೆಯಲ್ಲಿದ್ದ ವನಕಲ್ಲು ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಬಸವ ರಾಮ ನಂದ ಶ್ರೀಗಳ ದಿವ್ಯ ಸಾನಿಧ್ಯ ಮತ್ತು ನಿರರ್ಗಳ ವಾಗ್ವೈಖರಿಗೆ ಇಡೀ ಸಭಾಂಗಣವೆ ಮಂತ್ರ ಮುಗ್ಧವಾಯಿತು. ಸತತ 12 ಪದವಿಯನ್ನು ಸಂಪಾದಿಸಿರುವ ಇವರು ನಿತ್ಯ ಜ್ಞಾನಾರ್ಜನೆಯ ಶ್ರೇಷ್ಠ ಸರಸ್ವತಿಪುತ್ರರಾಗಿದ್ದಾರೆ ಹಾಗೂ ವೈರಾಗ್ಯಕುಲ ತಿಲಕರಾಗಿರುವ ಇಂತಹವರಿಂದ ಘನವೇದಿಕೆಗೆ ಅರ್ಥ ಬರುತ್ತದೆ. ಇನ್ನು ವೇದಿಕೆಯಲ್ಲಿ ಆಸೀನರಾಗಿದ್ದ ಶ್ರೀಮತಿ ಪದ್ಮ ನಾಗರಾಜ್ ರವರು ಇಂದು ಸಂಜೆಯ ಪತ್ರಿಕೆ ಸಂಪಾದಕರಾಗಿದ್ದು, ಇವರ ಯಶೋಗಾಥೆ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದು ಸುಮಾರು 12 ಜಿಲ್ಲೆಗಳಲ್ಲಿ ತಮ್ಮ ಪತ್ರಿಕೆಯ ಕದಂಬ ಬಾಹುವನ್ನು ವಿಸ್ತರಿಸಿರುವ ಈ ಹೆಣ್ಣುಮಗಳ ಯಶೋಗಾಥೆ ಎಂತಹವರನ್ನು ದಂಗಪಡಿಸುವಂತದ್ದು.
ಹಾಗೆ ಪತ್ರಿಕೋದ್ಯಮದ ಮತ್ತೊಬ್ಬ ಧ್ರುವತಾರೆ ಯಾದಂತಹ ರಾಧಾ ಹಿರೇಗೌಡರ್, ಪಬ್ಲಿಕ್ ಟಿವಿ, ಬಿಟಿವಿ ವಾಹಿನಿಯ ದಿಗ್ಗಜರ ಚಾನಲ್ನಲ್ಲಿ ಕಾರ್ಯ ನಿರ್ವಹಿಸಿ, ಗ್ಯಾರಂಟಿ ಚಾನಲ್ ನಿರ್ದೇಶಕಿಯಾಗಿ ಬೆಳೆದ ಈಕೆಯ ಕಥೆ ನಿಜವಾಗಿಯೂ ಕೂಡ ರೋಚಕವಾಗಿದ್ದು ಇಂಥವರ ಉಪಸ್ಥಿತಿ, ವೇದಿಕೆಯನ್ನು ಶ್ರೀಮಂತ ಗೊಳಿಸುತ್ತದೆ.
ಒಟ್ಟಾರೆ ಉದ್ಘಾಟನಾ ಕಾರ್ಯದಿಂದ ಹಿಡಿದು ಸಮಾರೋಪದವರೆಗೆ ನಡೆದ ಕಾರ್ಯಕ್ರಮದಲ್ಲಿ ಬಂಗ್ಲೆಮಲ್ಲಿಕಾರ್ಜುನ್ ರವರ ಮುತುವರ್ಜಿ, ಜಗಳೂರು ಲಕ್ಷ್ಮಣ್ ರವರ ನಿರ್ದೇಶನ ಹಾಗೂ ಡಿ ಸಿದ್ದರಾಜುರವರ ಎಲ್ಲವನ್ನು ಸಂಭಾಳಿಸುವಂತಹ ನೈಪುಣ್ಯತೆ ಎದ್ದು ಕಾಣುತ್ತಿತ್ತು. ಇಡೀ ಕಾರ್ಯಕ್ರಮವನ್ನು ಅತ್ಯಂತ ನವಿರಾಗಿ ತೆಗೆದುಕೊಂಡು ಹೋದ ನಿರೂಪಕ ಡಾ. ವೆಂಕಟೇಶ್ ಆರ್ ಚೌತಾಯಿ ಅವರ ನಿರರ್ಗಳ ನಿರೂಪಣೆ ಇಡೀ ಸಭಾಂಗಣವನ್ನು ಆಕರ್ಷಿಸಿತು.
ತಾಲೂಕಿನ ಅಧ್ಯಕ್ಷರಾದ ಶ್ರೀ ಬೆಟ್ಟಹಳ್ಳಿ ರುದ್ರೇಶ್ ರವರ ಅಹರ್ನಿಷಿ ಶ್ರಮ, ರಾಜ್ಯ ಕಾರ್ಯಕಾರಿಸಮಿತಿ ಸದಸ್ಯರಾದ ಶ್ರೀ ಮಹೇಶ್ ಬಿಕೆ ರವರ ಮಾರ್ಗದರ್ಶನ ಹಾಗೂ ಶ್ರೀ ಕೆ ಓ ಮಹೇಶ್ ರವರ ಉಪಯುಕ್ತ ಸಲಹೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆ ಸಲು ಕಾರಣವಾಯಿತು. ಒಟ್ಟಾರೆ ಜಿಲ್ಲಾ ಸಮಾವೇಶವನ್ನು ಯಶಸ್ವಿಯಾಗಿ ಪೂರೈಸಿದ ಸಮಸ್ತ ನೆಲಮಂಗಲ ತಾಲೂಕಿನ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ತಾಲೂಕಿನ ಅಧ್ಯಕ್ಷರುಗಳ ಕಾರ್ಯಶ್ರದ್ಧೆ, ಇಡೀ ಕಾರ್ಯಕ್ರಮವನ್ನ ದೊಡ್ಡಮಟ್ಟದಲ್ಲಿ ತಲು ಪಿಸಲು ಕಾರಣವಾಯಿತು.
ಇಂತಹ ಕಾರ್ಯಕ್ರಮಗಳು ಎಲ್ಲಾ ಜಿಲ್ಲೆಗಳಲ್ಲೂ ಆಯೋಜನೆಗೊಂಡು, ಈ ಮೂಲಕ ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸುತ್ತಾ ಮತ್ತು ಪತ್ರಿಕೋದ್ಯಮದ ಏಳಿಗೆಗೆ ಶ್ರಮಿಸುತ್ತ ಕರ್ನಾಟಕ ಕಾರ್ಯನಿರತ ಪತ್ರಿಕಾ ಧ್ವನಿಯ ಸಂಘಟನೆಯನ್ನು ರಾಜ್ಯದಲ್ಲಿ ಮಂಚೂಣಿಗೆ ತರುವ ಎಂದು ಶಪಥ ಮಾಡುತ್ತಾ ಲೇಖಕನಾದ ನಾನು ನನ್ನೀ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.
ಲೇಖಕರು
ಎಸ್ ಎ ರೇಣುಕಾ ಪ್ರಸಾದ್
ಭೌತಶಾಸ್ತ್ರ ಉಪನ್ಯಾಸಕರು

