ಹಾಸನ: ಅಪಹರಣ ಪ್ರಕರಣದಲ್ಲಿ ಹೆಚ್ಡಿ ರೇವಣ್ಣ (HD Revanna) ಕುಟುಂಬಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳಿಲ್ಲ. ಆದರೆ ಭವಾನಿ ರೇವಣ್ಣ (Bhavani Revanna) ಇದೀಗ ತಲೆಮರೆಸಿಕೊಂಡಿರುವುದು ಎಸ್ಐಟಿಯ ತಲೆನೋವಿಗೆ ಕಾರಣವಾಗಿದೆ.
34 ದಿನಗಳ ಕಾಲ ಕಣ್ಣಾಮುಚ್ಚಾಲೆ ಆಡಿದ್ದ ಪ್ರಜ್ವಲ್ ಇದೀಗ ಎಸ್‍ಐಟಿ ಖೆಡ್ಡಾಕ್ಕೆ ಬಿದ್ದಾಗಿದೆ. ಪೆನ್ಡ್ರೈವ್ ಕೇಸ್ಗೆ ಅಂಟಿಕೊಂಡಿರುವ ಮಹಿಳೆಯ ಕಿಡ್ನ್ಯಾಪ್ ಪ್ರಕರಣ ಭವಾನಿ ರೇವಣ್ಣಗೆ ಮುಳುವಾಗಿದೆ. ಇದನ್ನೂ ಓದಿ: ಮುಂದುವರಿದ ಬಾಂಬ್ ಬೆದರಿಕೆಗಳು -ಇಂಡಿಗೋ ವಿಮಾನಕ್ಕೆ ಮತ್ತೆ ಬೆದರಿಕೆ

ಭವಾನಿ ರೇವಣ್ಣಗೆ ಎಸ್‍ಐಟಿ ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಪತ್ರದಂತೆ ಎಸ್‍ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಆದರೆ, ಮನೆಯೊಳಗೆ ಹೋದ ಎಸ್‍ಐಟಿ ಅಧಿಕಾರಿಗಳಿಗೆ ಶಾಕ್ ಕಾದಿದೆ. ಭವಾನಿ ರೇವಣ್ಣ ಮನೆಯಲ್ಲಿದ್ದ ಇರದ ಕಾರಣ, ಸಂಜೆ 5ವರೆಗೆ ಕಾಯಲಿದ್ದಾರೆ.ಇದನ್ನೂ ಓದಿ: ನಾಳೆಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಪರ ವಕೀಲರು ಜನಪ್ರತಿನಿಧಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಶುಕ್ರವಾರ ಅರ್ಜಿ ವಜಾಗೊಂಡಿದೆ. ಈ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಪ್ರಜ್ವಲ್ ತಾಯಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಲೋಕಸಭೆ ಚುನಾವಣೆ: ದೇಶದಲ್ಲಿ ಮೋದಿ ಅಲೆ ಇದೆ – ಮತದಾನದ ಬಳಿಕ ಕಂಗನಾ ಪ್ರತಿಕ್ರಿಯೆ