ಈಗಂತೂ ಈ ಕ್ಯಾನ್ಸರ್ (Cancer) ರೋಗ ಎಂಬ ಮಹಾಮಾರಿ ಅನೇಕ ಜನರ ಪ್ರಾಣವನ್ನು ಬಲಿ ಪಡೆಯುತ್ತಿದೆ ಅಂತ ಹೇಳಿದರೆ ಸುಳ್ಳಲ್ಲ. ಪುರುಷರಲ್ಲಿ ಕ್ಯಾನ್ಸರ್ ದೇಹದ ಅನೇಕ ಅಂಗಾಂಶಗಳಲ್ಲಿ ಕಂಡು ಬಂದರೆ, ಮಹಿಳೆಯರು ಹೆಚ್ಚು ಸ್ತನ ಕ್ಯಾನ್ಸರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಅಂತ ಹೇಳಬಹುದು. ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುವ ಆಹಾರಗಳ ಆಯ್ಕೆಯ ಪ್ರಾಮುಖ್ಯತೆಯನ್ನು ಈಗಾಗಲೇ ಹಲವಾರು ಸಂಶೋಧನೆಗಳು ಮತ್ತು ವರದಿಗಳು ಎತ್ತಿ ತೋರಿಸಿವೆ. ಎಂದರೆ ಸ್ತನ ಕ್ಯಾನ್ಸರ್ಅ (Breast Cancer)ನ್ನು ಮಹಿಳೆಯರು ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರವಾದ ಡಯಟ್‌ನಿಂದ ಚೇತರಿಸಿಕೊಳ್ಳಬಹುದು ಮತ್ತು ಅದರ ಸಂಭಾವ್ಯ ಅಪಾಯವನ್ನು ಸಹ ತಡೆಯಬಹುದು.
ಆದ್ದರಿಂದ ಮಹಿಳೆಯ ಸೂಕ್ತವಾದ ಆಹಾರ ಕ್ರಮವನ್ನು ಅನುಸರಿಸುವುದು ಮತ್ತು ಉತ್ತಮವಾದ ಜೀವನಶೈಲಿಯನ್ನು ಅನುಸರಿಸುವುದು ತೀವ್ರ ಆರೋಗ್ಯ ಪರಿಸ್ಥಿತಿಗಳನ್ನು ತಡೆಯಬಹುದು. ಗಮನಾರ್ಹವಾಗಿ, ಸಾವಯವ ಆಹಾರಗಳು, ಕೀಟನಾಶಕಗಳನ್ನು ಸಿಂಪಡಿಸದೆ ಇರುವ ಆಹಾರಗಳನ್ನು ಸೇವಿಸುವುದರೊಂದಿಗೆ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದಂತೆ.
ಏನ್ ಹೇಳ್ತಾರೆ ನೋಡಿ ಉತ್ತಮ ಆರೋಗ್ಯಕ್ರಮದ ಬಗ್ಗೆ ತಜ್ಞರು
ಎಚ್‌ಟಿ ಲೈಫ್‌ಸ್ಟೈಲ್‌ನೊಂದಿಗಿನ ಸಂದರ್ಶನದಲ್ಲಿ, ನೇಚರ್‌ಲ್ಯಾಂಡ್ ಆರ್ಗಾನಿಕ್ಸ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕರಾದ ಅಜೀತ್ ಗೋಡಾರಾ ಅವರು ಮಾತನಾಡುತ್ತಾ “ಪ್ರತಿ ಊಟದಲ್ಲಿಯೂ ಸಹ ಸಾವಯವ ಆಹಾರಗಳನ್ನು ಅಳವಡಿಸಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ರಕ್ಷಿಸಿಕೊಳ್ಳಲು ಇದು ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ” ಎಂದು ಹೇಳಿದರು.
ಎಂತಹ ಡಯಟ್‌ಗಳನ್ನು ಫಾಲೋ ಮಾಡುವುದು ಒಳ್ಳೆಯದು?
ಹೈ-ಫೈಬರ್ ಡಯಟ್
ಅನೇಕ ಸಂಶೋಧನೆಗಳು ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸುವುದು ಸ್ತನ ಕ್ಯಾನ್ಸರ್‌ನ ಕಡಿಮೆ ಅಪಾಯಕ್ಕೆ ಸಂಬಂಧಿಸಿದೆ ಅಂತ ತೋರಿಸಿವೆ. ಧಾನ್ಯಗಳು, ಸೇಬು ಮತ್ತು ಪೇರಳೆಗಳಂತಹ ಹಣ್ಣುಗಳು ಮತ್ತು ಕ್ಯಾರೆಟ್ ಮತ್ತು ಎಲೆಗಳ ಸೊಪ್ಪಿನಂತಹ ತರಕಾರಿಗಳಂತಹ ಫೈಬರ್ ಸಮೃದ್ಧವಾಗಿರುವ ಆಹಾರಗಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕ್ಕೆ ಭದ್ರ ಬುನಾದಿ ಹಾಕಬಹುದು.
ಫೈಬರ್‌ನ ಶಕ್ತಿಯು ಹಾರ್ಮೋನ್ ಸಮತೋಲನವನ್ನು ಬೆಂಬಲಿಸುವ ಮತ್ತು ಜೀರ್ಣಕಾರಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಸಹ ಹೊಂದಿದ್ದು, ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಅಧಿಕ ಕೊಬ್ಬಿನಾಂಶವಿರುವ ಆಹಾರಗಳನ್ನು ಸೇವಿಸಬಾರದು
ಅಧಿಕ ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಿ. ಸ್ಯಾಚುರೇಟೆಡ್ ಕೊಬ್ಬಿನ ಆಹಾರ ಪದಾರ್ಥಗಳು ಸ್ತನ ಕ್ಯಾನ್ಸರ್‌ನ ಹೆಚ್ಚಿನ ಅಪಾಯಗಳಿಗೆ ಜೋಡಿಸುತ್ತವೆ. ಇದು ನಮ್ಮ ಆಹಾರದಲ್ಲಿ ನಾವು ನಿರ್ವಹಿಸಬೇಕಾದ ಸೂಕ್ಷ್ಮ ಸಮತೋಲನದ ಜ್ಞಾಪನೆಯಾಗಿದೆ, ಅಲ್ಲಿ ಕೊಬ್ಬು ಸೇವನೆಯಲ್ಲಿ ಗುಣಮಟ್ಟ ಮತ್ತು ಮಿತವಾಗಿರುವುದು ಪ್ರಮುಖವಾಗಿದೆ. ಮಾಂಸ, ಬೆಣ್ಣೆ ಮತ್ತು ಪೂರ್ಣ-ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸ್ವಲ್ಪ ಎಚ್ಚರಿಕೆಯಿಂದ ಸೇವಿಸಬೇಕು.
ಇದನ್ನೂ ಓದಿ:
ಮೂಲಂಗಿಯನ್ನು ಹೀಗೆ ಸ್ಟೋರ್ ಮಾಡಿ; 3 ತಿಂಗಳಾದ್ರೂ ಫ್ರೆಶ್ ಆಗಿರುತ್ತೆ!
ಸಾವಯವ ಆಹಾರಗಳು
ಕ್ಯಾನ್ಸರ್ ರೋಗದ ವಿರುದ್ಧ ಹೊರಡುವ ಗುಣವನ್ನು ಸಾವಯವ ಆಹಾರ ಪದಾರ್ಥಗಳು ಹೊಂದಿವೆ ನೋಡಿ. ಸಾವಯವ ಆಹಾರ ಪದಾರ್ಥಗಳ ಪ್ರಯೋಜನಗಳನ್ನು ನಾವು ಆಳವಾಗಿ ಪರಿಶೀಲಿಸಿದಾಗ, ಈ ಆಹಾರಗಳಲ್ಲಿ ಹಾನಿಕಾರಕ ಕೀಟನಾಶಕಗಳು ಮತ್ತು ರಾಸಾಯನಿಕಗಳ ಅನುಪಸ್ಥಿತಿಯು ನಿರ್ಣಾಯಕ ಅಂಶವಾಗಿ ಹೊರಹೊಮ್ಮುತ್ತದೆ.
ಸಂಶೋಧನೆ ಮುಂದುವರೆದಂತೆ, ಸಾವಯವ ಆಹಾರದ ಪ್ರಯೋಜನಗಳು, ವಿಶೇಷವಾಗಿ ಕ್ಯಾನ್ಸರ್ ಅನ್ನು ನಿವಾರಿಸುವಲ್ಲಿ, ಹೆಚ್ಚು ಸ್ಪಷ್ಟವಾಗುತ್ತದೆ. ಅವುಗಳು ಕೇವಲ ಆಹಾರದ ಆಯ್ಕೆಯಾಗಿರದೆ, ಅವು ಆರೋಗ್ಯಕರ ಜೀವನಕ್ಕೆ ಪೂರ್ವಭಾವಿ ಹೆಜ್ಜೆ ಸಹ ಆಗಿರುತ್ತದೆ ಮತ್ತು ಇದು ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಅಪಾಯಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಕ್ರೂಸಿಫೆರಸ್ ತರಕಾರಿಗಳು
ಸಾಮಾನ್ಯವಾಗಿ ಊಟದ ತಟ್ಟೆಯಲ್ಲಿ ಪಕ್ಕಕ್ಕೆ ಹೂಕೋಸು, ಎಲೆಕೋಸು ಮತ್ತು ಕೋಸುಗಡ್ಡೆಯಂತಹ ಕ್ರೂಸಿಫೆರಸ್ ತರಕಾರಿಗಳನ್ನು ಹಾಕಲಾಗಿರುತ್ತದೆ, ಇವುಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ತಮ್ಮ ಸಂಭಾವ್ಯ ಪಾತ್ರಕ್ಕಾಗಿ ಮನ್ನಣೆಯನ್ನು ಪಡೆಯುತ್ತಿವೆ.
ರೆಡ್ ವೈನ್ ಬಾಡಿಕಾನ್ ಡ್ರೆಸ್‌ನಲ್ಲಿ Nora!
ಇವುಗಳ ನಿಯಮಿತ ಸೇವನೆಯು ಆಕ್ರಮಣಕಾರಿ ಕ್ಯಾನ್ಸರ್ ಪ್ರಕಾರಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುತ್ತವೆ. ಹೆಚ್ಚಿನ ಫೈಬರ್ ಆಹಾರದ ಪ್ರಾಮುಖ್ಯತೆ, ಕೊಬ್ಬುಗಳಿಗೆ ಸಮತೋಲಿತ ವಿಧಾನ ಮತ್ತು ಸಾವಯವ ಮತ್ತು ಕ್ರೂಸಿಫೆರಸ್ ಆಹಾರಗಳ ಸೇರ್ಪಡೆಯು ಹೆಚ್ಚು ಸ್ಪಷ್ಟವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ