By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Lung Damage: ಕೋವಿಡ್‌ ನಂತರ ಭಾರತೀಯರಲ್ಲಿ ಕಾಡುತ್ತಿದೆ ಶ್ವಾಸಕೋಶ ಸಮಸ್ಯೆ! ನಿಮ್ಮ ಲಂಗ್ಸ್​ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Lung Damage: ಕೋವಿಡ್‌ ನಂತರ ಭಾರತೀಯರಲ್ಲಿ ಕಾಡುತ್ತಿದೆ ಶ್ವಾಸಕೋಶ ಸಮಸ್ಯೆ! ನಿಮ್ಮ ಲಂಗ್ಸ್​ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ಆರೋಗ್ಯ

Lung Damage: ಕೋವಿಡ್‌ ನಂತರ ಭಾರತೀಯರಲ್ಲಿ ಕಾಡುತ್ತಿದೆ ಶ್ವಾಸಕೋಶ ಸಮಸ್ಯೆ! ನಿಮ್ಮ ಲಂಗ್ಸ್​ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

Published March 5, 2024
Share
3 Min Read
1687664135 lungs 16876641363x2 1687664135 lungs 16876641363x2 1687664135 lungs 16876641363x2
SHARE

ಕೋವಿಡ್ (COVID 19) ಮಾರಕ ಸೋಂಕಿಗೆ ತುತ್ತಾಗಿ ಮತ್ತೆ ಗುಣಮುಖರಾಗಿರುವ ವ್ಯಕ್ತಿಗಳಿಗೆ ಶ್ವಾಸಕೋಶದ ತೊಂದರೆಗಳು ಕಾಣಿಸುತ್ತಿವೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ಇಡೀ ಜಗತ್ತನ್ನೇ ಅಲ್ಲೋಲ-ಕಲ್ಲೋಲ ಮಾಡಿದ್ದ ಕೊರೊನಾ (Corona Virus) ಸೋಂಕಿಗೆ ಸದ್ಯ ವ್ಯಾಕ್ಸಿನೇಷನ್ (Vaccination) ಮೂಲಕ ಹರಡುವಿಕೆಯನ್ನು ತಪ್ಪಿಸಲಾಗಿದೆ. ಆದರೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಜನ ಈಗಲೂ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ತಜ್ಞರು ಅಧ್ಯಯನಗಳಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್‌ ಸೋಂಕಿನಿಂದ ಬಳಲಿದ್ದ ಜನರಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ಎದುರಾಗಿದೆ. ಶ್ವಾಸಕೋಶದ ಕಾರ್ಯನಿರ್ವಹಣೆ ಮತ್ತು ಭಾರತೀಯರ ಜೀವನದ ಗುಣಮಟ್ಟದ ಮೇಲೆ ಕೋವಿಡ್-19 ಪ್ರಭಾವ ಬೀರಿದೆ ಎಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಡೆಸಿದ ಅಧ್ಯಯನವನ್ನು PLOS ಗ್ಲೋಬಲ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಜಾಹೀರಾತು

207 ಮಂದಿ ಮೇಲೆ ಅಧ್ಯಯನ

ಕೋವಿಡ್‌ ಮೊದಲ ಅಲೆ ವೇಳೆ ಸೋಂಕಿಗೆ ಒಳಗಾಗಿದ್ದ 207 ಮಂದಿ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಶ್ವಾಸಕೋಶದಲ್ಲಿ ಕೆಟ್ಟ ಪರಿಣಾಮ ಬೀರಿದ್ದು, ಶ್ವಾಸಕೋಶ ದುರ್ಬಲಗೊಳ್ಳುತ್ತಿವೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವ ವ್ಯಕ್ತಿಗಳಿಗೆ ನಡಿಗೆ ಪರೀಕ್ಷೆ, ರೇಡಿಯಾಗ್ರಫಿ, ಉಸಿರಾಟಕ್ಕೆ ಸಂಬಂಧ ಪರೀಕ್ಷೆಗಳನ್ನು ಮಾಡಲಾಗಿದೆ. ಇದರ ಪ್ರಕಾರ ಕೆಲವರು ಸಮಸ್ಯೆಗಳಿಂದ ಚೇತರಿಸಿಕೊಂಡರು, ಇನ್ನೂ ಕೆಲವರು ಜೀವಿತಾವಧಿ ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: Crying: ಸಣ್ಣ-ಪುಟ್ಟ ವಿಚಾರಕ್ಕೂ ಅಳು ಏಕೆ ಬರುತ್ತದೆ? ವೈದ್ಯರ ನೀಡುವ ಕಾರಣ ಏನು?

ಕೋವಿಡ್‌ನಿಂದ ಶ್ವಾಸಕೋಶಕ್ಕೆ ಡ್ಯಾಮೇಜ್

COVID-19 ನಿಂದ ಚೇತರಿಸಿಕೊಳ್ಳುತ್ತಿರುವ ಜನರಲ್ಲಿ, ದೀರ್ಘಾವಧಿಯ ಶ್ವಾಸಕೋಶದ ಕಾರ್ಯದ ದುರ್ಬಲತೆ ಇರಲಿದೆ. SARS-CoV-2 ಸೋಂಕಿನ ಸಂದರ್ಭದಲ್ಲಿ ಅತ್ಯಂತ ತೀವ್ರವಾದ ಅನಾರೋಗ್ಯವೆಂದರೆ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್ (ARDS). ಕೆಲವರಲ್ಲಿ, ARDS ಶ್ವಾಸಕೋಶದ ಕಾಯಿಲೆಗೆ ಕಾರಣವಾಗಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಕೋವಿಡ್‌ ಸೋಂಕಿಗೆ ತುತ್ತಾಗಿದ್ದವರಿಗೆ ಶ್ವಾಸಕೋಶದ ಹಾನಿ, ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ನಿರಂತರವಾಗಿ ಕಾಡಬಹುದು ಎಂದು ಗುರುಗ್ರಾಮ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರರಾದ ಡಾ ನೇಹಾ ರಸ್ತೋಗಿ ಹೇಳುತ್ತಾರೆ.

ಜಾಹೀರಾತು
ಮಸಾಲಾ ಶೇಂಗಾ ರೆಸಿಪಿ!


ಮಸಾಲಾ ಶೇಂಗಾ ರೆಸಿಪಿ!

ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ?

1. ಉಸಿರಾಟ ಸಮಸ್ಯೆ: ಕೋವಿಡ್‌ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವ ವ್ಯಕ್ತಿಗಳಲ್ಲಿ ಉಸಿರಾಟದ ಸಮಸ್ಯೆಗಳು ಎದುರಾಗಬಹುದು. ಯಾವುದಾದ್ರೂ ದೈಹಿಕ ಕಾರ್ಯಗಳಲ್ಲಿ ತೊಡಗಿದ್ದಾಗ ಉಸಿರಾಡಲು ಕಷ್ಟಕರವಾಗಬಹುದು. ಉಸಿರಾಡುವಾಗ ಆರಾಮಾವಾಗಿ ಉಸಿರು ಬಿಡಲು, ತೆಗೆದುಕೊಳ್ಳಲು ಸಮಸ್ಯೆಯಾಗಬಹುದು.

2. ಕೆಮ್ಮು : ನಿರಂತರವಾಗಿ ಕೆಮ್ಮು ಕಾಡಬಹುದು. ಒಮ್ಮೆ ಶುರುವಾದ ಕೆಮ್ಮು ಕಡಿಮೆಯಾಗಲು ದೀರ್ಘಾವಧಿ ತೆಗೆದುಕೊಳ್ಳಬಹುದು. ಕೆಮ್ಮಿನಿಂದ ಶ್ವಾಸಕೋಶಗಳಿಗೆ ಡ್ಯಾಮೇಜ್‌ ಆಗಬಹುದು.

3. ಎದೆನೋವು : ಕೆಲವರಿಗೆ ಎದೆನೋವು ಕಾಣಿಸಿಕೊಳ್ಳುವುದು, ಇಲ್ಲದಿದ್ದರೆ ಎದೆಯು ಬಿಗಿದ ರೀತಿ ಅನುಭವಗಳಾಗುತ್ತದೆ. ಇದರಿಂದ ಆರಾಮವಾಗಿ ಉಸಿರಾಡಲು ಕಷ್ಟವಾಗುತ್ತದೆ.

ಜಾಹೀರಾತು

4. ಆಯಾಸ : ಯಾವಾಗಲೂ ಆಯಾಸವಾಗುವುದು, ಯಾವುದೇ ಕೆಲಸ ಮಾಡುವಾಗಲು ಸುಸ್ತು ಕಾಡುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆಗೊಳಿಸಬಹುದು.

5. ಉಸಿರಾಟದ ಸೋಂಕುಗಳು : ಶ್ವಾಸಕೋಶದ ಹಾನಿ, ರೋಗಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವ ಸಾಧ್ಯತೆಗಳಿವೆ.

ಯಾವ ರೀತಿ ಗುಣಪಡಿಸಿಕೊಳ್ಳಬಹುದು?
ಕೋವಿಡ್ ನಂತರದ ಶ್ವಾಸಕೋಶದ ಹಾನಿಯನ್ನು ನಿರ್ವಹಿಸುವುದು, ರೋಗಲಕ್ಷಣಗಳನ್ನು ನಿವಾರಿಸುವ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸಿಕೊಳ್ಳಲು ಕೆಲ ನಿಯಮಗಳು ಅನುಸರಿಸಿದರೆ ಸೂಕ್ತ ಎಂದು ಡಾ.ರಸ್ತೋಗಿ ತಿಳಿಸಿದ್ದಾರೆ.

ಜಾಹೀರಾತು

1. ಶ್ವಾಸಕೋಶದ ಆರೋಗ್ಯಕ್ಕಾಗಿ ವ್ಯಾಯಾಮ : ಸರಿಯಾದ ಕ್ರಮದಲ್ಲಿ ಮಾಡುವ ವ್ಯಾಯಾಮಗಳಿಂದ ಶ್ವಾಸಕೋಶದ ಕಾರ್ಯ, ಸಹಿಷ್ಣುತೆ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

2. ಔಷಧಿಗಳು ತೆಗೆದುಕೊಳ್ಳುವುದು : ಉಸಿರಾಟದ ತೊಂದರೆ ಮತ್ತು ಶ್ವಾಸನಾಳದಲ್ಲಿ ಉರಿಯೂತದಂತಹ ರೋಗಲಕ್ಷಣಗಳನ್ನು ನಿವಾರಿಸುವ ಔಷಧಿಗಳು ಮತ್ತು ಉರಿಯೂತದ ಔಷಧಗಳನ್ನು ಶಿಫಾರಸು ಮಾಡಬಹುದು.

3. ಆಮ್ಲಜನಕ ಚಿಕಿತ್ಸೆ: ತೀವ್ರವಾದ ಶ್ವಾಸಕೋಶ ಸಮಸ್ಯೆ ಇದ್ದಾಗ, ರಕ್ತ ಸಂಚಾರದಲ್ಲಿ ಸರಿಯಾದ ಆಮ್ಲಜನಕದ ಮಟ್ಟವನ್ನು ಖಚಿತಪಡಿಸಿಕೊಳ್ಳಲು ಪೂರಕ ಆಮ್ಲಜನಕ ಚಿಕಿತ್ಸೆಯು ಅಗತ್ಯ.

4. ಪೌಷ್ಠಿಕಾಂಶವುಳ್ಳ ಆಹಾರ ಸೇವನೆ : ಆರೋಗ್ಯಕ್ಕೆ ಪೂರಕವಾದ, ದೇಹಕ್ಕೆ ಶಕ್ತಿ ನೀಡುವಂತ ಪೌಷ್ಠಿಕಾಂಶವುಳ್ಳ ಸಮತೋಲಿತ ಆಹಾರ ಸೇವನೆ ಉತ್ತಮ.

ಜಾಹೀರಾತು

5. ಮಾನಸಿಕ ಬೆಂಬಲ: ಅನಾರೋಗ್ಯ ಸಮಸ್ಯೆಗಳು ಮಾನಸಿಕ ಶಕ್ತಿ ಕುಗ್ಗಿಸುತ್ತದೆ. ಮಾನಸಿಕವಾಗಿ ಕುಗ್ಗದೆ, ಅದನ್ನು ನಿಭಾಯಿಸಲು ಸರಿಯಾದ ಮಾರ್ಗ ಅನುಸರಿಸಬೇಕು. ಸಮಾಲೋಚನೆ, ಸಕಾರಾತ್ಮಕ ಚಿಂತನೆಗಳಿಂದ ಪ್ರಯೋಜನವಾಗುತ್ತದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Plant Based Meat Vs Real Meat ಯಾವುದು ಬೆಸ್ಟ್​? ಇದರಿಂದ ಆಗುವ ಯೂಸ್​ಗಳೇನು?

ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ದಕ್ಷಿಣ ಭಾರತದ ಆಹಾರಗಳು! ಇವುಗಳು ತೂಕ ನಷ್ಟಕ್ಕೂ ಉಪಯುಕ್ತ

COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್

ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು

ಗಟ್ಟಿಮುಟ್ಟಾದ ಆರೋಗ್ಯಕರ ಕೂದಲು ಬೇಕೇ? ಇಲ್ಲಿವೆ ನೋಡಿ 5 ಸೂಪರ್‌ಫುಡ್‌ಗಳು

Share This Article
Facebook Copy Link Print
Previous Article ear 2024 02 928cd4bac4d6e56f3070b7473864bb1a 3x2 ear 2024 02 928cd4bac4d6e56f3070b7473864bb1a 3x2 ear 2024 02 928cd4bac4d6e56f3070b7473864bb1a 3x2 Ear Cleaning: ಪ್ರತಿ ದಿನ ಕಿವಿ ಶುಚಿಗೊಳಿಸುವುದು ಅಗತ್ಯವೇ ? ತಜ್ಞರು ಹೇಳೋದೇನು?
Next Article 1706069623 1706000886 1704983239 winter sleep 3 2023 12 8bc072675b8b3b99554c77ba9f760f65 3x2 1706069623 1706000886 1704983239 winter sleep 3 2023 12 8bc072675b8b3b99554c77ba9f760f65 3x2 1706069623 1706000886 1704983239 winter sleep 3 2023 12 8bc072675b8b3b99554c77ba9f760f65 3x2 Sleeping Times: ನೀವು ಯಾವುದೋ ಸಮಯಕ್ಕೆ ಮಲಗಿ, ಯಾವಾಗಲೋ ಏಳ್ತೀರಾ? ಈ ತಪ್ಪುಗಳನ್ನ ಮಾಡ್ತಿದ್ರೆ ಹುಷಾರ್!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up