ಆರೋಗ್ಯ ಇಲಾಖೆ ಬಡವರು, ಕ್ಯಾನ್ಸರ್ ಪೀಡಿತರು ಮತ್ತು ವೃದ್ಧರಿಗೆ ಮನೆ ಬಾಗಿಲಿಗೆ ಉಚಿತ ಒಪಿಡಿ ಸೇವೆ ಒದಗಿಸಲು ಹೊಸ ಯೋಜನೆ ಆರಂಭಿಸಿದೆ. ಸದ್ಯ ಈ ಯೋಜನೆ ಸಿವಿ ರಾಮನ್ ನಗರದಲ್ಲಿ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ಸೇವೆ ನೀಡಲಾಗುತ್ತಿದೆ.
ಬಡ ವರ್ಗದ ಜನರಿಗೆ ಅದರಲ್ಲೂ ಕ್ಯಾನ್ಸರ್ ಪೀಡಿತರಿಗೆ, ವೃದ್ಧರಿಗೆ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ನಯಾ ಪ್ಲಾನ್ ಮಾಡಿದ್ದು, ಮನೆ ಬಾಗಿಲಿಗೆ ಒಪಿಡಿ ಸೌಲಭ್ಯ ನೀಡಲು ಮುಂದಾಗಿದೆ.
ಹೀಗಾಗಿ ಸಿವಿ ರಾಮನ್ ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡು ಆಯ್ದ ಏರಿಯಾಗಳಲ್ಲಿ ಚಿಕಿತ್ಸೆ ನೀಡಲು ಸಜ್ಜಾಗಿದೆ.ಕರ್ನಾಟಕದಲ್ಲೇ ಮೊದಲ ಬಾರಿಗೆ ಕ್ಯಾನ್ಸರ್ ಪೀಡಿತರಿಗೆ, ಬ್ರೇನ್ ಹ್ಯಾಮರೇಜ್, ವೃದ್ಧರು ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಮನೆ ಮನೆಗೆ ತೆರಳಿ ಉಚಿತ ಒಪಿಡಿ ಚಿಕಿತ್ಸೆ ನೀಡಲು ಮುಂದಾಗಿದೆ.
ಪೈಲೆಟ್ ಯೋಜನೆಯಡಿ ಸಿವಿ ರಾಮನ್ ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ ಈ ಒಪಿಡಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.ವಯೋವೃದ್ಧರು, ಕ್ಯಾನ್ಸರ್ ಪೀಡಿತರು, ಬ್ರೇನ್ ಹ್ಯಾಮರೇಜ್ ಸೇರಿದ್ದಂತೆ ಗಂಭೀರ ಸಮಸ್ಯೆಯಿಂದ ಬಳಲುವ ರೋಗಿಗಳು ಇನ್ಮುಂದೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕಿಲ್ಲ, ಮನೆಯ ಬಳಿಯೇ ಒಪಿಡಿ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

