ಕಲಬುರಗಿ: ಅನ್ಯ ಜಾತಿ (Caste) ಎಂದು ಪ್ರಿಯಕರ ಮದುವೆಗೆ (Marriage) ನಿರಾಕರಿಸಿದ್ದಕ್ಕೆ ಯುವತಿ (Women) ನೇಣಿಗೆ ಶರಣಾಗಿರುವ ಘಟನೆ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.
ಪುಷ್ಪಾ(26) ಮೃತ ಯುವತಿ. ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನ ಜೊತೆ ಪುಷ್ಪಾ ಪ್ರೀತಿಯಲ್ಲಿ ಬಿದ್ದಿದ್ದರು. ಜೊತೆಗೆ ಪುಷ್ಪಾ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದರು. ಆದರೆ ಕೆಲ ದಿನಗಳಿಂದ ಪುಷ್ಪಾ ಪ್ರೀಯಕರ ಕಿರಣ್‌ಎ ಮದುವೆ ಮಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಳು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅಬ್ಬರ; ಧರೆಗುರುಳಿದ ಮರಗಳು, ಮನೆಗಳಿಗೆ ನುಗ್ಗಿದ ನೀರು
ಪ್ರೇಮಿಗಳ ನಡುವೆ ಜಾತಿ ವಿಚಾರ ಅಡ್ಡ ಬಂದಿತ್ತು. ಅನ್ಯ ಜಾತಿ ಹಿನ್ನೆಲೆ ಯುವತಿ ಮದುವೆಗೆ ಕಿರಣ್ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಕಿರಣ್ ಈಗಲೇ ಮದುವೆ ಬೇಡ ಏಂದು ಪುಷ್ಪಾಗೆ ಸಮಾಧಾನ ಮಾಡಿದ್ದ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಕ್ಲಾಸ್ ತೆಗೆದುಕೊಂಡ ಚುನಾವಣಾ ಆಯೋಗ
ಇದರಿಂದ ಮನನೊಂದ ಪುಪ್ಪಾ ನೇಣು ಬಿಗಿದುಕೊಂಡು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 3 ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಸಂಸದ ಪ್ರಜ್ವಲ್ ರೇವಣ್ಣಗೆ ಹೆಚ್ಚಿದ ಸಂಕಷ್ಟ, ದಾಖಲಾಯ್ತು ಮತ್ತೊಂದು ಅತ್ಯಾಚಾರ ಕೇಸ್