ಅಕ್ಷಯ ತೃತೀಯ (Akshaya Tritiya) ಪ್ರಯುಕ್ತ ಈ ಶುಬ ಸಂದರ್ಭದಲ್ಲಿ ಶ್ರೀ ಮಠದಲ್ಲಿ (Sri.Mutt) ಚಂದನ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮೊದಲಿಗೆ ಪವಿತ್ರವಾದ ಶ್ರೀಗಂಧದ (SriGandha) ಪೇಸ್ಟ್ ಅನ್ನು ಗರ್ಭಗುಡಿಯ ಕಡೆಗೆ ಮೆರವಣಿಗೆ ಮಾಡಿ ಕೊಂಡೊಯ್ಯಲಾಯಿತು. ನಂತರ ಪೂಜ್ಯ ಶ್ರೀ ರಾಯರ ಮೂಲ ಬೃಂದಾವನಕ್ಕೆ ಪುಣ್ಯ ಗಂಧಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳಾರತಿ ಮಾಡಲಾಯಿತು.

ಇನ್ನು ಶ್ರೀಗಂಧವನ್ನು ಪೇಸ್ಟ್ ಅನ್ನು ಶ್ರೀ ರಾಯರ ಬೃಂದಾವನಕ್ಕೆ ಮಾತ್ರವಲ್ಲದೆ ಶ್ರೀ ಮಂಚಾಲಮ್ಮ, ಶ್ರೀ ಪ್ರಾಣದೇವರು, ಶ್ರೀ ರುದ್ರ ದೇವರು ಮತ್ತು ಶ್ರೀ ಮಠದಲ್ಲಿರುವ ಗೌರವಾನ್ವಿತ ಸಂತರ ಇತರ ಪವಿತ್ರ ಬೃಂದಾವನಗಳಿಗೂ ಅನ್ವಯಿಸುತ್ತದೆ.
