ಚಿಕ್ಕೋಡಿ : ಇಮ್ಮಾನುವೆಲ್ ಗ್ಲೋರಿ ಚರ್ಚ್ ನಲ್ಲಿ ಅದ್ದೂರಿಯಾಗಿ ಕ್ರಿಸಮಸ್ ಹಬ್ಬವನ್ನು ಆಚರಲಾಯಿತು.. ಪ್ರಪಂಚಕ್ಕೆ ಪ್ರೀತಿ ಶಾಂತಿ ಮಮಕಾರದ ಸಂದೇಶ ಸಾರಿದ ಯೇಸುಕ್ರಿಸ್ತನ ಹುಟ್ಟುಹಬ್ಬದ ಪ್ರಯುಕ್ತ ಕ್ರಿಸಮಸ್ ಹಬ್ಬವನ್ನು ಪ್ರತಿ ವರ್ಷ್ ಆಚರಿಸಲಾಗುವದು,
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ 3ನೇ ಮೈಲ್ ಬಸ್ ನಿಲ್ದಾಣದ ಹತ್ತಿರ ಇರುವ ಇಮ್ಮಾನುವೆಲ್ ಗ್ಲೋರಿ ಚರ್ಚ್ ನಲ್ಲಿ ನಡೆದ ಸಮಾರಂಭದಲ್ಲಿ ದೇಶದಲ್ಲಿ ಶಾಂತಿ ಸೌಹಾರ್ದ ಸಮಾದಾನ ಸುಭಿಕ್ಷೆ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಲಾಯಿತು, ಘನ ಸೇವಕರಾದ ಫಾದರ್ ಬಾಬು ಹಳ್ಳೂರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು, ನೂರಾರು ಜನ ಕಾರ್ಯಕ್ರಮಕ್ಕೆ ಸಾಕ್ಷವಾದರೂ ಸಭೆಯ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳಲ್ಲಿ ಯೇಸುವಿನ ಸಂದೇಶದ ಕುರಿತು ಸಾಕ್ಷ ಚಿತ್ರಗಳು ನೋಡುಗರನ್ನು ಮಂತ್ರ ಮುಗ್ದ ರನ್ನಗಿಸಿದವು
ಉತ್ತಮ ಸುಪ್ರೀತ ಸಂದೇಶ ಕಾರ್ಯಕ್ರಮ ಜರುಗಿದವು ಹಾಗೂ ಅಣ್ಣ ಪ್ರಸಾದ ಸೇವೆ ಸಲ್ಲಿಸಲಾಯಿತು. ಹಿರಿಯರಾದ ಮಲ್ಲಪ್ಪ ಚಿಕ್ಕುಡ, ಸುಖದೇವ ಕಾಂಬಳೆ, ಪ್ರಕಾಶ್ ಕುರಣೆ, ಪರಮೇಶ್ ಮಾಂಗ, ಪತ್ರಕರ್ತರಾದ ಮಲಿಕ್ ಸಪ್ತಸಾಗರ, ಅಜಿತ್ ನಾಯಿಕ್, ರಾಜು ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು
ವರದಿ : ಎಂ. ಕೆ. ಸಪ್ತಸಾಗರ

