ಬೆಂಗಳೂರು : ಇವತ್ತು ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ವರ ಹುಟ್ಟುಹಬ್ಬವೇನೂ ಅಲ್ಲ. ಅದು ಇವತ್ತಿಗೆ ಸರಿಯಾಗಿ ಎರಡು ತಿಂಗಳು ನಂತರ ಇದೆ, ಅವರು ಹುಟ್ಟಿದ್ದು ಜುಲೈ 29ರಂದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ದಿಢೀರನೆ ಪ್ರಸಾದ್ ಮನೆಗೆ ಭೇಟಿ ನೀಡಿದರು. ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಬೋಕೆ ಹಿಡಿದು ನಿಂತಿದ್ದ ಪ್ರಸಾದ್ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು.
ಸಾಮಾನ್ಯವಾಗಿ ಮುಖ್ಯಮಂತ್ರಿಯಾದವರು ಶಾಸಕರ, ಸಚಿವರ ಮನೆಗೆ ಹೋಗೋದಿಲ್ಲ, ಅವರೆಲ್ಲ ಸಿಎಂರನ್ನು ಕಾಣಲು ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರುತ್ತಾರೆ. ಹಾಗಾಗಿ, ಸಿದ್ದರಾಮಯ್ಯ ಪ್ರಸಾದ ಮನೆಗೆ ಭೇಟಿ ನೀಡಿದ ಹಿಂದೆ ಗಹನವಾದ ಕಾರಣವಿದೆ.

