ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ಕರಾವಳಿ (Coastal Karnataka) ಮತ್ತು ಮಧ್ಯ ಕರ್ನಾಟಕದಲ್ಲಿ (Central Karnataka) ಭಾರೀ ಮಳೆಯಾಗುವ (Heavy Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ,ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಇದನ್ನೂ ಓದಿ: ಸಿಹಿಸುದ್ದಿ ಕೊಟ್ಟ ನಟಿ ಹರ್ಷಿಕಾ ದಂಪತಿ – ನೆಟ್ಟಿಗರ ಗಮನ ಸೆಳೆದ ವಿಭಿನ್ನ ಫೋಟೋಶೂಟ್
ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಐಎಂಡಿ (IMD) ಹೇಳಿದ್ದು, ಬಿರುಗಾಳಿ ಸಮೇತ ಭಾರೀ ಮಳೆಯಾಗಲಿದೆ ಎಂದು ಮೂನ್ಸೂಚನೆ ನೀಡಿದೆ.
ಮನೆಯೊಳಗೆ ಇರಿ, ಸಾಧ್ಯವಾದರೆ ಪ್ರಯಾಣ ತಪ್ಪಿಸಿ. ಮರಗಳ ಕೆಳಗಡೆ ಆಶ್ರಯ ಪಡೆಯಬೇಡಿ. ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಿ ಎಂದು ಐಎಂಡಿ ಸೂಚನೆ ನೀಡಿದೆ. ಇದನ್ನೂ ಓದಿ: ಸಿಎಂ-ಡಿಸಿಎಂ ಗದ್ದುಗೆಗಾಗಿ ಗುದ್ದಾಟ – ಹೈಕಮಾಂಡ್ ಗೆ ಡಿಕೆಶಿ ಮನವಿ ಸಲ್ಲಿಕೆ

